ಹಾಟ್‌ಮೇಲ್ ಅಥವಾ ಲೈವ್‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ಹೇಗೆ ನೋಡಬಹುದು ಎಂದು ಪ್ರಸನ್ನ ಅವರು ಇಲ್ಲಿ ವಿವರಿಸಿದ್ದಾರೆ. ಈ ಸೌಲಭ್ಯ ಜಿಮೇಲ್‌ನಲ್ಲಿ ಇಲ್ಲ. ಆದರೆ ಇದನ್ನು ಎರಡು ರೀತಿಯಿಂದ ಮಾಡಬಹುದು. ಇದಕ್ಕೆ ನಿಮಗೆ ಹಾಟ್‌ಮೇಲ್ ಮತ್ತು ಜಿಮೇಲ್‌ನ ಎರಡೂ ಅಕೌಂಟ್ ಇರಬೇಕು.
ಮೊದಲನೇ ರೀತಿ: ಜಿಮೇಲ್‌ನ Forwarding ಆಯ್ಕೆಯಿಂದ ಇದನ್ನು ಪಡಿಬಹುದು
೧. ಮೊದಲು ಪ್ರಸನ್ನ ಅವರು ಇಲ್ಲಿ ವಿವರಿಸಿದ ಹಾಗೆ ಮಾಡಿ. ಆಮೇಲೆ ನಿಮ್ಮ ಜಿಮೇಲ್‌ನ ಅಕೌಂಟ್‌ಗೆ ಲಾಗಿನ್ ಆಗಿ.
೨. ಕೆಳಗಿನ ಚಿತ್ರದಲ್ಲಿ ತೋರಿಸಿರುವ ಹಾಗೆ, Settingsಗೆ ಹೋಗಿ, Forwarding and POP/IMAPನ್ನು ಚಿಟುಕಿಸಿ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
೩. ಬಂದ dialog boxನಲ್ಲಿ ನಿಮ್ಮ ಹಾಟ್‌ಮೇಲ್‌ನ ವಿಳಾಸ ಕೊಡಿ.
೪. Next ಚಿಟುಕಿಸಿ, confirmation ಕಿಡಕಿ ಬರುತ್ತದೆ.
೫. OK ಚಿಟುಕಿಸಿ, ಹಾಟ್‌ಮೇಲ್‌ಗೆ ಹೋಗಿ. ಜಿಮೇಲ್‌ನಿಂದ ಮೇಲ್ ಬಂದಿರುತ್ತದೆ. ಅದರಲ್ಲಿಯ confirmation code ಕಾಪಿ ಮಾಡಿ, ಮತ್ತೆ ಜಿಮೇಲ್‌ಗೆ ಬನ್ನಿ. ಕೆಳಗೆ ಕಾಣಿಸುವ ಕಿಡಕಿಯಲ್ಲಿ codeನ್ನು ಸೇರಿಸಿ Verify ಗುಂಡಿ ಒತ್ತಿ.
೬. ಈಗ Forward a copy of incoming mail to ಗುಂಡಿ ಆಯ್ಕೆ ಮಾಡಿ, ಅದರ ಮುಂದಿರೋ drop-down boxನಲ್ಲಿ ನಿಮ್ಮ ಹಾಟ್‌ಮೇಲ್ ವಿಳಾಸ ಆಯ್ದುಕೊಳ್ಳಿ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಇನ್ನು ಮುಂದೆ ನಿಮ್ಮ ಜಿಮೇಲ್‌ಗೆ ಬಂದ ಪ್ರತಿಯೊಂದು ಅಂಚೆಯನ್ನು ಜಿಮೇಲ್, ಹಾಟ್‌ಮೇಲ್‌ಗೆ ಕಳುಹಿಸುತ್ತದೆ (ಜಿಮೇಲ್‌ನಲ್ಲೂ ಒಂದು copy ಇರುತ್ತದೆ). ಹಾಟ್‌ಮೇಲ್‌ನಿಂದ ನಿಮಗೆ SMS ಬರುತ್ತದೆ.
ಎರಡನೇ ರೀತಿ: ಹಾಟ್‌ಮೇಲ್‌ಗೆ ಜಿಮೇಲ್‌ನ ಖಾತೆ ಸೇರಿಸುವದರಿಂದ.
ಹಾಟ್‌ಮೇಲ್‌ಗೆ ಜಿಮೇಲ್‌ನ ಖಾತೆ ಹೇಗೆ ಸೇರಿಸಬೇಕು ಎಂದು ಪ್ರಸನ್ನ ಅವರು ಇಲ್ಲಿ ಹೇಳಿದ್ದಾರೆ.
ಇದರಿಂದ ನಿಮ್ಮ ಜಿಮೇಲ್‌ಗೆ ಬಂದ ಪ್ರತಿಯೊಂದು ಅಂಚೆ ಹಾಟ್‌ಮೇಲ್‌ಗೆ ಬರುತ್ತದೆ ಮತ್ತು ಹಾಟ್‌ಮೇಲ್‌ನಿಂದ ನಿಮಗೆ SMS ಬರುತ್ತದೆ.
ನೆನಪಿಡಿ, ಎರಡನೆಯ ರೀತಿಗಿಂತ ಮೊದಲನೆಯ ರೀತಿ ಸುರಕ್ಷಿತ.
(ಈ ಲೇಖನವನ್ನು ಬರೆದವರು ಸ್ನೇಹಿತರಾದ ಶ್ರೀನಿವಾಸ ವೀ. ಬ೦ಗೋಡಿ ಅವರು. ಅವರ ಅನುಮತಿಯ ಮೇರೆಗೆ ಈ ಲೇಖನವನ್ನು ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನವು ಸಂಪದದಲ್ಲಿ ಪ್ರಕಟವಾಗಿದೆ.)
No comments:
Post a Comment