Sunday, August 01, 2010

MP3 ಕಡತಗಳನ್ನು ಜೋಡಿಸುವುದು ಹೇಗೆ?

MP3 ಕಡತಗಳನ್ನು ತುಂಡರಿಸುವುದು ಹೇಗೆ ಅಂತ ಮಿಶ್ರಿಕೋಟಿಯವರ ಬರಹ ನೋಡಿದರೂ, ಉಬುಂಟುವನ್ನು ೧೦.೦೪ಗೆ ಅಪ್‌ಡೇಟ್ ಮಾಡಿದ ಮೇಲೆಯೇ ಪ್ರಯೋಗ ಮಾಡೋಣ ಎಂದುಕೊಂಡಿದ್ದೆ. ಮೊನ್ನೆ ಅದಕ್ಕೂ ಸಮಯ ಕೂಡಿ ಬಂತು.

ನಿಜಕ್ಕೂ Mp3splt-gtk audio splitter ತುಂಬ ಸರಳವಾದ ತಂತ್ರಾಂಶ. ಅದರಿಂದ ಒಂದೆರಡು ಹಾಡುಗಳನ್ನು ತುಂಡರಿಸಿದ್ದಾಯ್ತು. ಈಗ ನಮಗೆ ಬೇಕಾದ ಭಾಗಗಳನ್ನಷ್ಟೆ ಕೂಡಿಸಲು ಬರುತ್ತದೆಯೆ ಎನ್ನುವ ಯೋಚನೆ ಬಂತು.

ಉದಾಹರಣೆಗೆ ಒಂದು ಹಾಡಿನ ಸಾಹಿತ್ಯ ಮತ್ತು ಮತ್ತು ಸಂಗೀತ ಬೇರೆ ಬೇರೆಯಾಗಿ ತುಂಡರಿಸುತ್ತೇನೆ. ಹಾಡಿನಲ್ಲಿಯ ಸಂಗೀತ ಬಿಟ್ಟು, ಬರಿ ಸಾಹಿತ್ಯದ ಭಾಗವನ್ನಷ್ಟೆ(ಅಥವಾ vice-versa) ಜೋಡಿಸಬೇಕಾದರೆ?

ಅದಕ್ಕೂ ಉಬುಂಟುನಲ್ಲಿ ಏನಾದರೂ ತಂತ್ರಾಂಶವಿದೆಯೇ ಎಂದು ಗೂಗಲಿಸಿದೆ. ಗೂಗಲ್ ತೋರಿಸಿದ ಫಲಿತಾಂಶದಲ್ಲಿ, ಕೆಲವು ಉಚಿತ ಮತ್ತು ಕೆಲವು ಖರೀದಿಸಬೇಕಾದ ತಂತ್ರಾಶಗಳು ಇದ್ದವು. ಆದರೆ ಒಂದು ಅಚ್ಚರಿಯ ಫಲಿತಾಂಶ ಇತ್ತು.

ಯುನಿಕ್ಸ್/ಲಿನುಕ್ಸ್‌ನಲ್ಲಿ cat ಅಂತ ಒಂದು command ಇದೆ. ಇದರಿಂದ ನಿಮ್ಮ ಕಡತವನ್ನು ನೋಡಬಹುದು (dosನ type commandನಂತೆ). ಅಲ್ಲದೇ ಬೇರೆ ಬೇರೆ ಕಡತಗಳನ್ನು ಜೋಡಿಸಲೂ ಬಹುದು.

ಈಗ a.mp3 ಮತ್ತು b.mp3 ಅಂತ ಎರಡು ಕಡತಗಳಿವೆ. ಅವೆರಡನ್ನೂ ಜೋಡಿಸಬೇಕಾದರೆ,
cat a.mp3 b.mp3 > z.mp3
ಅಷ್ಟೆ! ಗಮನಿಸಿ, DOS ನಲ್ಲಿ ಇದೇ ತರದ command (copy) ಇದ್ದರೂ, ಅದರಿಂದ ಬರೀ text ಕಡತಗಳನ್ನಷ್ಟೇ ಜೋಡಿಸಬಹುದು.

ಆಯ್ತು, ಈಗ ಮೂರು ಕಡತಗಳನ್ನು ಜೋಡಿಸಬೇಕಾದರೆ?
cat a.mp3 b.mp3 c.mp3 > z.mp3

ಇನ್ನೂ ಜಾಸ್ತಿ ಕಡತಗಳಿಗೆ? ಇನ್ನೂ ಸುಲಭ. ಎಲ್ಲ ಕಡತಗಳನ್ನು ಒಂದು folderಗೆ ವರ್ಗಾಯಿಸಿ. ಕೆಳಗಿನ command ಓಡಿಸಿ.
cat *.mp3 final.mp3

folderನಲ್ಲಿದ್ದ ಎಲ್ಲ ಕಡತಗಳು ಸೇರಿ, final.mp3 ಎಂಬ ಒಂದೇ ಕಡತವಾಗಿರುತ್ತದೆ.


(ಈ ಲೇಖನವನ್ನು ಬರೆದವರು ಸ್ನೇಹಿತರಾದ ಶ್ರೀನಿವಾಸ ವೀ. ಬ೦ಗೋಡಿ ಅವರು. ಅವರ ಅನುಮತಿಯ ಮೇರೆಗೆ ಈ ಲೇಖನವನ್ನು ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನವು ಸಂಪದದಲ್ಲಿ ಪ್ರಕಟವಾಗಿದೆ.) 

2 comments:

  1. ಇದೆ ವಿಧಾನದಲ್ಲಿ ವೀಡಿಯೊ ಕಡತಗಳನ್ನೂ ಸಹ ಜೋಡಿಸಬಹುದಾಗಿರುತ್ತದೆ.

    ReplyDelete
  2. ಧನ್ಯವಾದ ಭಾವಜೀವಿ. ನಾನು mp4 ವೀಡಿಯೊ ಕಡತಗಳ ಮೇಲೆ ಪ್ರಯತ್ನಿಸಿದೆ. ಬರಲಿಲ್ಲ :-(
    ಗೂಗಲಿಸಿದಾಗ, MP4Box ಕಮ್ಯಾಂಡನಿಂದ ಸಾಧ್ಯ ಎಂದು ಗೊತ್ತಾಯಿತು (ನಾನಿನ್ನೂ ಪ್ರಯತ್ನಿಸಿಲ್ಲ)

    ReplyDelete