Saturday, August 07, 2010

ಕಿರುದಾರಿಗಳಿವೆ ಗಮನಿಸಿ!

ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.
ಉದಾಹರಣೆಗೆ ವಿಂಡೋಸ್‌ನಲ್ಲಿ ಬರಹ IMEಯನ್ನು ಓಡಿಸ (run/execute) ಬೇಕಾಗಿದೆ. ಅದಕ್ಕೆ ಸಾಧಾರಣವಾಗಿ ಕಡಿಮೆಯಂದರೂ ಮೌಸ್‌ನಿಂದ ೪ ಚಿಟುಕು (click) ಬೇಕು. ಇದಕ್ಕೆ shortcut ಮಾಡಿದರೆ ಕೆಲಸ ಸುಲಭ.
shortcutನ್ನು ಮಾಡುವದಕ್ಕೆ ತುಂಬಾ ವಿಧಾನಗಳಿವೆ. ಅದರಲ್ಲಿ ಇಲ್ಲಿ ಎರಡು ವಿಧಾನಗಳನ್ನು ಕೊಟ್ಟಿದೆ.

ಮೊದಲನೆಯ ವಿಧಾನ:
೧. ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.
ಉದಾ: Start -> All Programs -> BarahaIME 1.0 -> BarahaIME 1.0


















೨. ಅದರಲ್ಲಿ “Pin to Start menu”ನ್ನು ಚಿಟುಕಿಸಿ.

೩. Start ಗುಂಡಿಯನ್ನು ಚಿಟುಕಿಸಿ. Recent Programs ಮೇಲುಗಡೆ application ಹೆಸರು ಬಂದಿರುತ್ತೆ.



























ಎರಡನೇ ವಿಧಾನ:
೧. ಮೊದಲಿನಂತೆ ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.
ಉದಾ: Start -> All Programs -> BarahaIME 1.0 -> BarahaIME 1.0

೨. ಅದರಲ್ಲಿ Propertiesನ್ನು ಚಿಟುಕಿಸಿ

೩. Properties ಕಿಟಕಿ ಬರುತ್ತೆ.



























೪. ಅದರಲ್ಲಿ Shortcut Key: ಎದುರಿನ ಡಬ್ಬಿ(box)ಯನ್ನು ಚಿಟುಕಿಸಿ.

೫. ಈಗ ನಿಮಗೆ ಬೇಕಾದ ಅಕ್ಷರ (key) ಒತ್ತಿ. ಆ ಅಕ್ಷರ CTRL+ALT ಜೊತೆ ಕಾಣಿಸುತ್ತೆ.
ನಾನು B ಒತ್ತಿದಾಗ, ಚಿತ್ರದಲ್ಲಿ ತೋರಿಸಿರುವಂತೆ “CTRL + ALT + B” ಬಂತು.

೬. OK ಒತ್ತಿ.

ಇನ್ನು ಮೇಲೆ ನಿಮಗೆ application ಓಡಿಸಬೇಕಾದರೆ ಈ shortcut key (ಉದಾ: CTRL+ALT+B) ಒತ್ತಿದರೆ ಸಾಕು, application ತಟ್ಟಂತ ಪ್ರತ್ಯಕ್ಷ!

ಕೊ: ನಿಮಗೆ ಬೇರೆ ಸೇರಿಕೆ(combination) , ಉದಾ: CTRL+SHIFT shortcut ಬೇಕಾದರೆ, ಆ ಸೇರಿಕೆ ಒತ್ತಬೇಕು.
ಹಾಗೆ Function keyಗಳನ್ನೂ ಬಳಸಬಹುದು.

ಕೊಕೊ: ಬೇರೆ applicationನ ಸೇರಿಕೆ, ನೀವು ಕೊಟ್ಟ ಸೇರಿಕೆ ಜೊತೆ ಸಂದಿಗ್ಧತೆ ಇರದಂತೆ ಎಚ್ಚರವಹಿಸಿ.

7 comments:

  1. ತುಂಬ ಒಳ್ಳೆಯ ಮಾಹಿತಿ ಶ್ರೀನಿವಾಸ. ಹಾಗೆಯೇ ಫಾಂಟ್ ಸ್ವಲ್ಪ ದೊಡ್ಡದಾಗಿ ಹಾಕಿ, ಓದಲು ಸುಲಭವಾಗುತ್ತದೆ.

    ಧನ್ಯವಾದಗಳೊಂದಿಗೆ,
    -ಪ್ರಸನ್ನ.ಎಸ್.ಪಿ

    ReplyDelete
  2. ಮೆಚ್ಚಿದ್ದಕ್ಕೆ ಧನ್ಯವಾದ ಪ್ರಸನ್ನ. ಫಾಂಟ್ ದೊಡ್ಡದು ಮಾಡಿದ್ದೇನೆ.

    ReplyDelete
  3. ಬ್ಲಾಗ್ ವಿನ್ಯಾಸ ಬದಲಿಸಿದ್ದೇನೆ. ಹೇಗಿದೆ? :-)

    ReplyDelete
  4. ಚೆನ್ನಾಗಿದೆ. ಬ್ಲಾಗ್ ಆರ್ಕೈವ್ (Blog Archive) ಎಲ್ಲಕ್ಕಿಂತ ಮೇಲೆ ಬಂದರೆ ಓದುಗರಿಗೆ ಅನುಕೂಲ.

    ReplyDelete
  5. ಆರ್ಕೈವ್ ಮೇಲೆ ಬಂತು! ಧನ್ಯವಾದಗಳು. ಇನ್ನಷ್ಟು ಲೇಖನಗಳನ್ನು ಬರೆಯಿರಿ. ನಾನೂ ಲೇಖನಗಳನ್ನು ಬರೆಯಲು ಪ್ರಯತ್ನಿಸುವೆ.

    ReplyDelete
  6. ಮಸ್ತ್! ಧನ್ಯವಾದ :-)
    ಹೆಚ್ಚು ಲೇಖನಗಳನ್ನು ಬರೆಯಲು ಪ್ರಯತ್ನಿಸುವೆ. ಓದುಗರಿಂದ ಪ್ರತಿಕ್ರಿಯೆ ಬಂದರೆ, ಅವರಿಗೆ ಎಂತಹ ಲೇಖನಗಳು ಬೇಕು ಎಂದು ತಿಳಿಸಿದರೆ, ತುಂಬ ಅನುಕೂಲ.

    ReplyDelete
  7. ಅದೇ ಸಮಸ್ಯೆ. ಓದುಗರಾರೂ ಪ್ರತಿಕ್ರಿಯೆ ನೀಡುತ್ತಲೇ ಇಲ್ಲ. ಯಾವ ರೀತಿ ಲೇಖನಗಳನ್ನು ಬರೆಯಬೇಕೆಂದೇ ಗೊತ್ತಾಗುತ್ತಿಲ್ಲ. :(

    ReplyDelete