Sunday, July 25, 2010

ಟೆಕ್‌-ಕನ್ನಡ ತಾಣದ ಬಗ್ಗೆ ಮಾಹಿತಿ



ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುವುದು. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು. ಅದಕ್ಕಾಗಿ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮ್ಮನ್ನು ಲೇಖಕರನ್ನಾಗಿ  ಸೇರಿಸಿಕೊಳ್ಳಲಾಗುವುದು. (ನೂರು ಜನರಿಗೆ authorಗಳಾಗುವ ಅವಕಾಶವಿದೆ. ಎಲ್ಲರಿಗೂ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚು ಕ್ರಿಯಾಶೀಲರಾಗಿರುವವರನ್ನು ಉಳಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ techkannada[at]gmail[dot]com ಸಂಪರ್ಕಿಸಿ.) ಅಥವಾ ನೀವು ಅನುಮತಿ ನೀಡಿದರೆ ನಿಮ್ಮ ಲೇಖನಗಳನ್ನು ನಿಮ್ಮ ಹೆಸರಿನ ಜೊತೆ ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗುವುದು. (ಲೇಖಕರಿಗಾಗಿ ಸೂಚನೆಗಳನ್ನು ಇಲ್ಲಿ ಓದಬಹುದು). ಹಾಗೂ ಈ ತಾಣವನ್ನು ನಿರ್ವಹಿಸುವಲ್ಲಿ ಆಸಕ್ತಿ ಹೊಂದಿದ್ದರೆ ಅಂತಹವರನ್ನು Adminಗಳಾಗಿ ಸೇರಿಸಲಾಗುವುದು. ನೀವು Adminಗಳಾಗಲು ಬಯಸಿದಲ್ಲಿ ಅದನ್ನು ನಿಮ್ಮ ಇ-ಅಂಚೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಟೆಕ್-ಕನ್ನಡೇತರ Adminಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಇಲ್ಲಿ ಓದಿಕೊಳ್ಳಬೇಕು.

ಇದರ ಮೊದಲ ಪ್ರಯತ್ನವಾಗಿ ಸದಸ್ಯರೊಬ್ಬರು ಸಂಪದದಲ್ಲಿ ಪ್ರಕಟಿಸಿರುವ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಅವರ ಅನುಮತಿಯೊಂದಿಗೆ ಟೆಕ್-ಕನ್ನಡದಲ್ಲಿ ಹಾಕಲಾಗಿದೆ ಹಾಗೂ ಕೆಲವು ಕನ್ನಡ ತಾಣಗಳಿಗೆ ಲಿಂಕ್ ನೀಡಲಾಗಿದೆ. ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು. 


ಟೆಕ್-ಕನ್ನಡಕ್ಕೆ ನಿಮ್ಮಿಂದ ಈ ಸಹಾಯಗಳು ದೊರೆಯಬಹುದೇ:

  • ಈ ತಾಣಕ್ಕೆ ನಿರ್ವಾಹಕರಾಗಿ
  • ಈ ತಾಣಕ್ಕೆ  ಲೇಖಕರಾಗಿ
  • ಈ ತಾಣವನ್ನು ನಿಮ್ಮ  ಸ್ನೇಹಿತರಿಗೆ ತಿಳಿಸಿ
  • ಕನ್ನಡದ ಇತರ ತಾಣಗಳ ವಿಳಾಸ ತಿಳಿಸಿ
  • ಈ ತಾಣವನ್ನು Follow ಮಾಡಬಹುದು


ಟೆಕ್‌-ಕನ್ನಡದ ಇನ್ನೊಂದು ವಿಳಾಸ: http://techkannada.co.nr

ಟೆಕ್-ಕನ್ನಡ ಇತರ ತಾಣಗಳಲ್ಲಿ:
ಸಂಪದದಲ್ಲಿ ಟೆಕ್-ಕನ್ನಡ ಪ್ರೊಫೈಲ್
ಟ್ವಿಟರ್‌ನಲ್ಲಿ
ಫೇಸ್‌‌ಬುಕ್‌‌ನಲ್ಲಿ
ಆರ್ಕುಟ್‌‌ನಲ್ಲಿ
 

ಧನ್ಯವಾದಗಳೊಂದಿಗೆ,
-ಟೆಕ್-ಕನ್ನಡ ಬಳಗ.

3 comments:

  1. This comment has been removed by the author.

    ReplyDelete
  2. blog RSS feed enable ಮಾಡಿ. ಗೂಗಲ್ ರೀಡರ್ ನಲ್ಲಿ subscribe ಆಗುತ್ತಿಲ್ಲ!

    ReplyDelete
  3. RSS feed enable ಮಾಡಲಾಯಿತು. ಮುಂಚೆ ಇದರ ಬಗ್ಗೆ ಗಮನ ನೀಡಿರಲಿಲ್ಲ. ನೆನಪು ಮಾಡಿದ್ದಕ್ಕಾಗಿ ಧನ್ಯವಾದಗಳು ವಿಕಾಸ್,

    ReplyDelete