ನಿಮಗೆ ಇಷ್ಟವಾದ ಬ್ಲಾಗ್ಗಳನ್ನು ಫಾಲೋ ಮಾಡಬೇಕೆ? ಹಾಗಾದರೆ ಈ ರೀತಿ ಮಾಡಿ. ಮೊದಲು ನಿಮ್ಮ ಬ್ಲಾಗರ್ ಅಕೌಂಟಿಗೆ ಲಾಗಿನ್ ಆಗಿ. ಡ್ಯಾಷ್ಬೋರ್ಡ್ನಲ್ಲಿ ಕೆಳಗಡೆ Reading List ಎಂದು ಇರುತ್ತದೆ. ಅಲ್ಲಿ Blogs I'm Following ಎಂಬ ಆಯ್ಕೆಯ ಕೆಳಗೆ ADD ಎಂಬ ಬಟನ್ ಇರುತ್ತದೆ. ಅದನ್ನು ಕ್ಲಿಕ್ಕಿಸಿ.
ನಂತರ Add from URL ಎಂಬಲ್ಲಿ ನೀವು ಫಾಲೋ ಮಾಡಬೇಕಾದ ತಾಣದ ವಿಳಾಸ ನೀಡಿ, NEXT ಬಟನ್ ಒತ್ತಿರಿ.
ಅಲ್ಲಿ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಎರಡು ಆಯ್ಕೆ ಇರುತ್ತದೆ. ಅನಾಮಿಕರಾಗಿ ಫಾಲೋ ಮಾಡಬೇಕಿದ್ದರೆ Follow anonymously ಎಂಬುದನ್ನು ಆರಿಸಿ. ಇಲ್ಲದಿದ್ದರೆ Follow publicly as ನ್ನು ಆರಿಸಿ Follow ಒತ್ತಿರಿ.
ನಂತರ ನಿಮ್ಮ ಡ್ಯಾಷ್ಬೋರ್ಡ್ನಲ್ಲಿ ಆ ಬ್ಲಾಗ್ನ ಹೊಸ ಪೋಸ್ಟ್ಗಳ ಒಂದೆರಡು ಸಾಲು ಕಂಡುಬರುತ್ತದೆ. ಪೂರ್ತಿ ಲೇಖನ ಓದಬೇಕೆಂದರೆ ಆ ಲೇಖನದ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ ಓದಬಹುದು.
ಅಥವಾ ಇನ್ನೊಂದು ವಿಧಾನದಲ್ಲಿ ಬ್ಲಾಗ್ಗಳನ್ನು ಫಾಲೋ ಮಾಡಬಹುದು. ನೀವು ಫಾಲೋ ಮಾಡಬೇಕಾದ ಬ್ಲಾಗ್ಗೆ ಭೇಟಿ ಕೊಡಿ. ಅಲ್ಲಿ ಕಂಡುಬರುವ Follow ಬಟನ್ ಒತ್ತಿರಿ.
ನಂತರ ಅಲ್ಲಿ ಗೂಗಲ್ ಅಥವಾ ನಿಮ್ಮ ಇತರ ಅಕೌಂಟ್ ಇರುವ ಚಿತ್ರದ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನೀಡಿ ಲಾಗಿನ್ ಆಗಿ.
ನಂತರ Follow publicly as (ನಿಮ್ಮ ಹೆಸರು) ಅಥವಾ Follow anonymously ಎಂಬ ಆಯ್ಕೆಯಲ್ಲಿ ಒಂದನ್ನು ಆರಿಸಿ Follow ಬಟನ್ ಕ್ಲಿಕ್ ಮಾಡಿ.
-ಪ್ರಸನ್ನ.ಎಸ್.ಪಿ
Friday, July 30, 2010
Sunday, July 25, 2010
ಟೆಕ್-ಕನ್ನಡ ತಾಣದ ಬಗ್ಗೆ ಮಾಹಿತಿ
ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್ನ್ನು ಟೆಕ್-ಕನ್ನಡದಲ್ಲಿ ನೀಡಲಾಗುವುದು. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು. ಅದಕ್ಕಾಗಿ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮ್ಮನ್ನು ಲೇಖಕರನ್ನಾಗಿ ಸೇರಿಸಿಕೊಳ್ಳಲಾಗುವುದು. (ನೂರು ಜನರಿಗೆ authorಗಳಾಗುವ ಅವಕಾಶವಿದೆ. ಎಲ್ಲರಿಗೂ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚು ಕ್ರಿಯಾಶೀಲರಾಗಿರುವವರನ್ನು ಉಳಿಸಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ techkannada[at]gmail[dot]com ಸಂಪರ್ಕಿಸಿ.) ಅಥವಾ ನೀವು ಅನುಮತಿ ನೀಡಿದರೆ ನಿಮ್ಮ ಲೇಖನಗಳನ್ನು ನಿಮ್ಮ ಹೆಸರಿನ ಜೊತೆ ಟೆಕ್-ಕನ್ನಡದಲ್ಲಿ ಪ್ರಕಟಿಸಲಾಗುವುದು. (ಲೇಖಕರಿಗಾಗಿ ಸೂಚನೆಗಳನ್ನು ಇಲ್ಲಿ ಓದಬಹುದು). ಹಾಗೂ ಈ ತಾಣವನ್ನು ನಿರ್ವಹಿಸುವಲ್ಲಿ ಆಸಕ್ತಿ ಹೊಂದಿದ್ದರೆ ಅಂತಹವರನ್ನು Adminಗಳಾಗಿ ಸೇರಿಸಲಾಗುವುದು. ನೀವು Adminಗಳಾಗಲು ಬಯಸಿದಲ್ಲಿ ಅದನ್ನು ನಿಮ್ಮ ಇ-ಅಂಚೆಯಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಟೆಕ್-ಕನ್ನಡೇತರ Adminಗಳು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಇಲ್ಲಿ ಓದಿಕೊಳ್ಳಬೇಕು.
ಇದರ ಮೊದಲ ಪ್ರಯತ್ನವಾಗಿ ಸದಸ್ಯರೊಬ್ಬರು ಸಂಪದದಲ್ಲಿ ಪ್ರಕಟಿಸಿರುವ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಅವರ ಅನುಮತಿಯೊಂದಿಗೆ ಟೆಕ್-ಕನ್ನಡದಲ್ಲಿ ಹಾಕಲಾಗಿದೆ ಹಾಗೂ ಕೆಲವು ಕನ್ನಡ ತಾಣಗಳಿಗೆ ಲಿಂಕ್ ನೀಡಲಾಗಿದೆ. ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು.
ಇದರ ಮೊದಲ ಪ್ರಯತ್ನವಾಗಿ ಸದಸ್ಯರೊಬ್ಬರು ಸಂಪದದಲ್ಲಿ ಪ್ರಕಟಿಸಿರುವ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಅವರ ಅನುಮತಿಯೊಂದಿಗೆ ಟೆಕ್-ಕನ್ನಡದಲ್ಲಿ ಹಾಕಲಾಗಿದೆ ಹಾಗೂ ಕೆಲವು ಕನ್ನಡ ತಾಣಗಳಿಗೆ ಲಿಂಕ್ ನೀಡಲಾಗಿದೆ. ಇದರ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ನೀವೂ ಈ ಪ್ರಯತ್ನದಲ್ಲಿ ಭಾಗವಹಿಸಿ ಹಾಗೂ ನಿಮ್ಮ ಸ್ನೇಹಿತರನ್ನೂ ಟೆಕ್-ಕನ್ನಡಕ್ಕೆ ಕರೆತನ್ನಿ. ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಇತರ ತಾಣಗಳು ನಿಮಗೆ ಗೊತ್ತಿದ್ದರೆ ಅದರ ವಿಳಾಸ (URL) ತಿಳಿಸಿ. ಆ ತಾಣಕ್ಕೆ ಟೆಕ್-ಕನ್ನಡದಲ್ಲಿ ಒಂದು ಲಿಂಕ್ ಕೊಡಲಾಗುವುದು.
ಟೆಕ್-ಕನ್ನಡಕ್ಕೆ ನಿಮ್ಮಿಂದ ಈ ಸಹಾಯಗಳು ದೊರೆಯಬಹುದೇ:
- ಈ ತಾಣಕ್ಕೆ ನಿರ್ವಾಹಕರಾಗಿ
- ಈ ತಾಣಕ್ಕೆ ಲೇಖಕರಾಗಿ
- ಈ ತಾಣವನ್ನು ನಿಮ್ಮ ಸ್ನೇಹಿತರಿಗೆ ತಿಳಿಸಿ
- ಕನ್ನಡದ ಇತರ ತಾಣಗಳ ವಿಳಾಸ ತಿಳಿಸಿ
- ಈ ತಾಣವನ್ನು Follow ಮಾಡಬಹುದು
ಟೆಕ್-ಕನ್ನಡದ ಇನ್ನೊಂದು ವಿಳಾಸ: http://techkannada.co.nr
ಟೆಕ್-ಕನ್ನಡ ಇತರ ತಾಣಗಳಲ್ಲಿ:
ಸಂಪದದಲ್ಲಿ ಟೆಕ್-ಕನ್ನಡ ಪ್ರೊಫೈಲ್
ಟ್ವಿಟರ್ನಲ್ಲಿ
ಫೇಸ್ಬುಕ್ನಲ್ಲಿ
ಆರ್ಕುಟ್ನಲ್ಲಿ
ಧನ್ಯವಾದಗಳೊಂದಿಗೆ,
-ಟೆಕ್-ಕನ್ನಡ ಬಳಗ.
Saturday, July 24, 2010
ವರ್ಡ್ನಲ್ಲಿ ತಮಾಷೆಯಾದ ಫೀಚರ್
ಮೈಕ್ರೋಸಾಫ್ಟ್ ವರ್ಡ್ ಹಾಗೂ ಓಪನ್ ಆಫೀಸ್ ರೈಟರ್ನಲ್ಲಿ ಸುಲಭವಾಗಿ ಟೇಬಲ್ ಡ್ರಾ ಮಾಡಲು ಒಂದು ತಮಾಷೆಯಾದ ಫೀಚರ್ ಇದೆ. ಸುಮ್ಮನೆ +-+-+-+-+-+ ಅಂತ ಕೊಟ್ಟು ಎಂಟರ್ ಒತ್ತಿದ್ರೆ ಆಯ್ತು ಟೇಬಲ್ ರೆಡಿ.
ಆಮೇಲೆ ಕೊನೆಯ ಬಾಕ್ಸ್ನಲ್ಲಿ ಕರ್ಸರ್ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ. ಇಲ್ಲಿ ನೀವು ಎಷ್ಟು - ಗಳನ್ನು ಬಳಸುತ್ತೀರೋ ಅಷ್ಟು ಕಾಲಂಗಳನ್ನು ಪಡೆಯಬಹುದು. ಉದಾಹರಣೆಗೆ +--+--+--+ ಎಂದು ಕೊಟ್ಟರೆ ಮೂರು ಕಾಲಂಗಳು ಹಾಗೂ +--+--+--+--+ ಎಂದು ಕೊಟ್ಟರೆ ನಾಲ್ಕು ಕಾಲಂಗಳು ಬರುತ್ತವೆ. ಅಲ್ಲದೇ ಎರಡು + ಗಳ ನಡುವಿನ ಮಧ್ಯದಲ್ಲಿ - ಗಳ ಸಂಖ್ಯೆ ಹೆಚ್ಚಾದಷ್ಟೂ ಕಾಲಂನ ಅಗಲ ಹೆಚ್ಚಾಗುತ್ತದೆ. ಮೊದಲನೆಯ ಕಾಲಂ ಕಡಿಮೆ ಅಗಲ, ಎರಡನೆಯ ಕಾಲಂ ಸ್ವಲ್ಪ ದೊಡ್ಡದು ಹಾಗೂ ಮೂರನೆಯ ಕಾಲಂ ದೊಡ್ಡದಾಗಿ ಬೇಕಿದ್ದರೆ ಹೀಗೆ ಕೊಡಬಹುದು: +--+-----+--------+
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲೇ ಸಂಪದದಲ್ಲಿ ಪ್ರಕಟಗೊಂಡಿದೆ. ಆ ಲೇಖನ ಹಾಗೂ ಪ್ರತಿಕ್ರಿಯೆಗಳನ್ನು ಇಲ್ಲಿ ಓದಬಹುದು.
http://sampada.net/blog/prasannasp/22/07/2010/26976
ಕಂಪ್ಯೂಟರ್ನಲ್ಲಿ ದಾಖಲೆಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸುವುದು
ನಿಮ್ಮ ಕಂಪ್ಯೂಟರ್ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್ ಅಕೌಂಟ್ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ. ಮೊದಲು ಕಂಟ್ರೋಲ್ ಪ್ಯಾನಲ್ಗೆ ಹೋಗಿ.
ಅಲ್ಲಿ Folder Options ಓಪನ್ ಮಾಡಿ. View ಟ್ಯಾಬ್ ಒತ್ತಿರಿ.
ಅದರಲ್ಲಿ ಕೆಳಗಡೆ Use simple file sharing (Recommended) ಎಂಬುದು ಆಯ್ಕೆಗೊಂಡಿರುತ್ತದೆ. ಅದನ್ನು ತೆಗೆದುಹಾಕಿ ನಂತರ Apply ಒತ್ತಿ.
ಇವಿಷ್ಟು ಮೊದಲನೇ ಹಂತದ ಕೆಲಸಗಳು.
ಈಗ ನೀವು ಯಾವ ಫೋಲ್ಡರ್ಗೆ ಸೆಕ್ಯುರಿಟಿ ನೀಡಬೇಕೋ ಆ ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ Propertiesನ್ನು ಓಪನ್ ಮಾಡಿ. ನಂತರ Security ಟ್ಯಾಬ್ ಕ್ಲಿಕ್ ಮಾಡಿ.
Group or user names ಅನ್ನೋದರ ಕೆಳಗಿರುವ Add ಬಟನ್ ಒತ್ತಿರಿ. Enter the object names to select ಅನ್ನುವುದರ ಕೆಳಗಿನ ಬಾಕ್ಸ್ನಲ್ಲಿ ಯಾರಿಂದ ದಾಖಲೆಗಳನ್ನು ಮುಚ್ಚಿಡಬೇಕೋ ಅವರ ಯೂಸರ್ ನೇಮ್ನ್ನು ಕೊಟ್ಟು (ಉದಾ:Games) OK ಒತ್ತಿ.
ನಂತರ ಆ ಹೆಸರನ್ನು ಆಯ್ಕೆ ಮಾಡಿ ಕೆಳಗಿನ Full Control ಎದುರಿಗಿರೋ Deny ಅನ್ನೋದನ್ನು ಸೆಲೆಕ್ಟ್ ಮಾಡಿ Apply ಒತ್ತಿ. ಅದೇ ರೀತಿ ಯಾರ್ಯಾರಿಂದ ರಕ್ಷಿಸಬೇಕೋ ಅವರೆಲ್ಲರ ಯೂಸರ್ ನೇಮ್ಗಳನ್ನು Add ಮಾಡಿ ಎಲ್ಲದಕ್ಕೂ Deny ಕೊಟ್ಟು OK ಒತ್ತಿರಿ.
ಆದರೆ ಇಷ್ಟೆಲ್ಲಾ ಮಾಡಲು ನಿಮ್ಮದು "ಕಂಪ್ಯೂಟರ್ ಅಡ್ಮಿನಿಸ್ಟ್ರೇಟರ್" ಅಕೌಂಟ್ ಆಗಿರಬೇಕು. ಹೀಗೆ ಮಾಡಿದ ನಂತರ ಬೇರೆಯವರು ನಿಮ್ಮ ಫೋಲ್ಡರ್ನ್ನು ಓಪನ್ ಮಾಡಲು ಹೋದರೆ "ನಿಮಗೆ ಇದನ್ನು ವೀಕ್ಷಿಸಲು ಅನುಮತಿಯಿಲ್ಲ" ಎಂಬ ಸಂದೇಶ ಬರುತ್ತದೆ. ಬೇರೆಯವರದು "ಲಿಮಿಟೆಡ್ ಅಕೌಂಟ್" ಆಗಿದ್ದರೆ ಏನೂ ಮಾಡಲಾಗುವುದಿಲ್ಲ, ಆದರೆ ಅವರದು "ಕಂಪ್ಯೂಟರ್ ಅಡ್ಮಿನಿಸ್ಟ್ರೇಟರ್" ಅಕೌಂಟ್ ಆಗಿದ್ದರೆ, ಸ್ವಲ್ಪ ತಲೆ ಉಪಯೋಗಿಸಿದರೆ ನಿಮ್ಮ ಫೋಲ್ಡರ್ನ್ನು ಭೇಧಿಸಬಹುದು. ಆದರೂ ಅದು ಅಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಹಾಗೆಂದು ನಿಮ್ಮ ಗುಪ್ತ ದಾಖಲೆಗಳನ್ನು ಬೇರೆಯವರಿಂದ ರಕ್ಷಿಸಲು ಇದು ಅತ್ಯುತ್ತಮ ವಿಧಾನವೇನಲ್ಲ. ಬೇರೆಯವರಿಗೆ ಇದರ ಬಗ್ಗೆ ಗೊತ್ತಿಲ್ಲದಿದ್ದರೆ ಈ ವಿಧಾನ ಉಪಯುಕ್ತ.
ಆದರೆ ಒಂದು ವಿಷಯ ನೆನಪಿಡಿ, ಈ ಕಂಪ್ಯೂಟರ್ ಜಗತ್ತಿನಲ್ಲಿ ನೀವೆಷ್ಟೇ ದಾಖಲೆಗಳನ್ನು ಮುಚ್ಚಿಟ್ಟರೂ ಅದನ್ನು ಹ್ಯಾಕ್ ಮಾಡುವವರು ಇದ್ದೇ ಇರುತ್ತಾರೆ. ಆದ್ದರಿಂದ ರಹಸ್ಯ ಮಾಹಿತಿಗಳನ್ನು, ಎಲ್ಲರಿಗೂ ಉಪಯೋಗಿಸಲು ಸಿಗುವಂತಹ ಕಂಪ್ಯೂಟರ್ಗಳಲ್ಲಿ ಇಡದಿರುವುದೇ ಒಳಿತು.
-ಪ್ರಸನ್ನ.ಶಂಕರಪುರಮೇಲಿನ ಲೇಖನ ಈ ಮೊದಲೇ ಸಂಪದದಲ್ಲಿ ಪ್ರಕಟಗೊಂಡಿದೆ. ಆ ಲೇಖನವನ್ನು ಹಾಗೂ ಪ್ರತಿಕ್ರಿಯೆಗಳನ್ನು ಇಲ್ಲಿ ಓದಬಹುದು.
http://sampada.net/article/26992
ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು
ಮೈಕ್ರೋಸಾಫ್ಟ್ ವರ್ಡ್ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.
ನಂತರ Save ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Save options ಕೆಳಗೆ Embed TrueType fonts ಅನ್ನು ಸೆಲೆಕ್ಟ್ ಮಾಡಿ OK ಒತ್ತಿರಿ.
ಈಗ ನಿಮ್ಮ ಕಡತಗಳನ್ನು ಸೇವ್ ಮಾಡಿ ಕಳುಹಿಸಿದರೆ ಆ ಕಡತವು ಯಾವುದೇ ಫಾಂಟಿಲ್ಲಿ ಬರೆದಿದ್ದರೂ ಕೂಡ ಬೇರೆ ಕಂಪ್ಯೂಟರ್ಗಳಲ್ಲಿ ಅದನ್ನು ಓದಬಹುದು, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಓದುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. Unicodeನಲ್ಲಿ ಇಂತಹ ಹೆಚ್ಚಿನ ತೊಂದರೆಗಳಿರುವುದಿಲ್ಲ. ಆದರೆ ANSIಯಲ್ಲಿ ಸಾಕಷ್ಟು ಫಾಂಟಿನ ರಗಳೆಗಳಿರುತ್ತವೆ. ಆದ್ದರಿಂದ Unicodeನ್ನೇ ಹೆಚ್ಚು ಬಳಸುವುದು ಸೂಕ್ತ.
-ಪ್ರಸನ್ನ.ಶಂಕರಪುರ
ಅನಲಾಗ್ ಸರ್ಕ್ಯುಟ್ ಮೇಕರ್
ಅನಲಾಗ್ ಸರ್ಕ್ಯುಟ್ಗಳನ್ನು ವಿನ್ಯಾಸ ಮಾಡಲು ಸರ್ಕ್ಯುಟ್ ಮೇಕರ್ ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ಇದರಲ್ಲಿ ಸಾಕಷ್ಟು ಮಿತಿಗಳಿದ್ದರೂ (limitations) ಸರಳ ಸರ್ಕ್ಯುಟ್ಗಳನ್ನು ವಿನ್ಯಾಸ ಮಾಡಲು ಉಪಯುಕ್ತ. ಸರ್ಕ್ಯಟ್ ಮೇಕರ್ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು.ಇದನ್ನು ಉಪಯೋಗಿಸಲು ಸಹಾಯ ಮಾಡುವ ಸಹಾಯ ಕಡತವನ್ನು ಇಲ್ಲಿಂದ ಪಡೆಯಬಹುದು. ಸಹಾಯ ಕಡತವನ್ನು ಓದಿಕೊಳ್ಳದಿದ್ದರೆ ಈ ತಂತ್ರಾಂಶವನ್ನು ಉಪಯೋಗಿಸುವುದು ಕಷ್ಟಕರ. ಕೆಳಗೆ ಹಾಕಿರುವ ಚಿತ್ರಗಳು ಸಹಾಯ ಕಡತದಿಂದ ತೆಗೆದುಕೊಂಡ ಮಾದರಿ ಸರ್ಕ್ಯುಟ್ಗಳು.
ತಂತ್ರಾಂಶ:
http://my.ece.ucsb.e...
ಸಹಾಯ ಕಡತ:
http://my.ece.ucsb.e...
ತಂತ್ರಾಂಶ:
http://my.ece.ucsb.e...
ಸಹಾಯ ಕಡತ:
http://my.ece.ucsb.e...
-ಪ್ರಸನ್ನ.ಶಂಕರಪುರ
ಮೈಕ್ರೋಸಾಫ್ಟ್ ವರ್ಡ್ನಲ್ಲಿ ಕನ್ನಡ ಫಾಂಟಿನ ತೊಂದರೆ
ಮೈಕ್ರೋಸಾಫ್ಟ್ ವರ್ಡ್ನಲ್ಲಿ ಫಾಂಟ್ ಲಿಸ್ಟ್ನಲ್ಲಿ ಕನ್ನಡ ಫಾಂಟ್ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.
ಅಲ್ಲಿ List font names in their font ಎಂಬುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Close ಒತ್ತಿರಿ.
ನಂತರದಲ್ಲಿ ಫಾಂಟ್ಗಳು ಸರಿಯಾಗಿ ಕಾಣುತ್ತವೆ.
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲು ಸಂಪದದಲ್ಲಿ ಪ್ರಕಟವಾಗಿದೆ. ಆ ಲೇಖನ ಹಾಗೂ ಕಾಮೆಂಟುಗಳನ್ನು ಇಲ್ಲಿ ಓದಬಹುದು.
http://sampada.net/article/26975
ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ URL
ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದರೆ ಉಚಿತವಾಗಿ ನಿಮ್ಮ ತಾಣಕ್ಕೆ ಕನ್ನಡ ಲಿಪಿಯಲ್ಲಿ ಒಂದು URL ಪಡೆಯಬಹುದು. ಆ URL ಈ ರೀತಿ ಇರುತ್ತದೆ- http://ನಿಮ್ಮಹೆಸರು.co.cc.
ಉದಾಹರಣೆಗೆ ನೋಡಿ, ನಾನು ನನ್ನ ಕನ್ನಡ ಬ್ಲಾಗ್ ತಾಣ http://prasannakanna... ಗೆ http://ಪ್ರಸನ್ನ.co.cc ಎಂಬ URL ಪಡೆದಿದ್ದೇನೆ. ಪ್ರಸನ್ನ.co.cc ಎಂದು ಕೊಟ್ಟರೆ ಸೀದಾ ನನ್ನ ಕನ್ನಡ ಬ್ಲಾಗಾದ http://prasannakanna... ಗೆ redirect ಆಗುತ್ತದೆ. ಇದರ ಉಪಯೊಗವೆಂದರೆ ಕನ್ನಡದಲ್ಲಿಯೂ URL ಗಳನ್ನು ಪಡೆಯಬಹುದು ಹಾಗೂ ಉದ್ದವಾದ ತಾಣಗಳಿಗೆ ಸಣ್ಣದಾದ ನೆನಪಿಟ್ಟುಕೊಳ್ಳಲು ಸುಲಭವಾಗುವ URL ಹೊಂದಬಹುದು.
ಇನ್ನೇಕೆ ತಡ? ಬೇರೆಯವರು ನಿಮ್ಮ ಹೆಸರನ್ನು ಪಡೆಯುವ ಮೊದಲು ನೀವೇ ಕನ್ನಡ ಲಿಪಿಯಲ್ಲಿ ನಿಮ್ಮ ತಾಣಕ್ಕೆ URL ಪಡೆದುಕೊಳ್ಳಿ.
ಏನಾದರೂ ಸಂದೇಹವಿದ್ದರೆ ದಯವಿಟ್ಟು ಕೇಳಿ. ಸಹಾಯಕ್ಕೆ ಸದಾ ಸಿಧ್ಧ. ಒಟ್ಟಿನಲ್ಲಿ ಅಂತರ್ಜಾಲದಲ್ಲಿ ಹೆಚ್ಚೆಚ್ಚು ಕನ್ನಡವನ್ನು ನಾವು ಉಪಯೋಗಿಸಬೇಕು.
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲು ಸಂಪದದಲ್ಲಿ ಪ್ರಕಟಗೊಂಡಿದೆ. ಆ ಲೇಖನವನ್ನು ಹಾಗೂ ಕಾಮೆಂಟುಗಳನ್ನು ಇಲ್ಲಿ ಓದಬಹುದು.
http://sampada.net/article/26958
ಉದಾಹರಣೆಗೆ ನೋಡಿ, ನಾನು ನನ್ನ ಕನ್ನಡ ಬ್ಲಾಗ್ ತಾಣ http://prasannakanna... ಗೆ http://ಪ್ರಸನ್ನ.co.cc ಎಂಬ URL ಪಡೆದಿದ್ದೇನೆ. ಪ್ರಸನ್ನ.co.cc ಎಂದು ಕೊಟ್ಟರೆ ಸೀದಾ ನನ್ನ ಕನ್ನಡ ಬ್ಲಾಗಾದ http://prasannakanna... ಗೆ redirect ಆಗುತ್ತದೆ. ಇದರ ಉಪಯೊಗವೆಂದರೆ ಕನ್ನಡದಲ್ಲಿಯೂ URL ಗಳನ್ನು ಪಡೆಯಬಹುದು ಹಾಗೂ ಉದ್ದವಾದ ತಾಣಗಳಿಗೆ ಸಣ್ಣದಾದ ನೆನಪಿಟ್ಟುಕೊಳ್ಳಲು ಸುಲಭವಾಗುವ URL ಹೊಂದಬಹುದು.
ಇನ್ನೇಕೆ ತಡ? ಬೇರೆಯವರು ನಿಮ್ಮ ಹೆಸರನ್ನು ಪಡೆಯುವ ಮೊದಲು ನೀವೇ ಕನ್ನಡ ಲಿಪಿಯಲ್ಲಿ ನಿಮ್ಮ ತಾಣಕ್ಕೆ URL ಪಡೆದುಕೊಳ್ಳಿ.
ಏನಾದರೂ ಸಂದೇಹವಿದ್ದರೆ ದಯವಿಟ್ಟು ಕೇಳಿ. ಸಹಾಯಕ್ಕೆ ಸದಾ ಸಿಧ್ಧ. ಒಟ್ಟಿನಲ್ಲಿ ಅಂತರ್ಜಾಲದಲ್ಲಿ ಹೆಚ್ಚೆಚ್ಚು ಕನ್ನಡವನ್ನು ನಾವು ಉಪಯೋಗಿಸಬೇಕು.
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲು ಸಂಪದದಲ್ಲಿ ಪ್ರಕಟಗೊಂಡಿದೆ. ಆ ಲೇಖನವನ್ನು ಹಾಗೂ ಕಾಮೆಂಟುಗಳನ್ನು ಇಲ್ಲಿ ಓದಬಹುದು.
http://sampada.net/article/26958
ಇಮೇಲ್ ಮೂಲಕ ಬ್ಲಾಗರ್ಗೆ ಲೇಖನಗಳನ್ನು ಪೋಸ್ಟ್ ಮಾಡುವುದು
ನೀವು ನಿಮಗೆ ಇಮೇಲ್ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್ಗಳಿಗೆ ಪೋಸ್ಟ್ ಮಾಡಬೇಕಿದ್ದರೆ ಬ್ಲಾಗರ್ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್ಕೆ ಬರುತ್ತದೆ. ಮೊದಲು ಬ್ಲಾಗರ್ನಿಂದ ನಿಮ್ಮ ಅಕೌಂಟಿಗೆ ಲಾಗಿನ್ ಆಗಿ.
ನಂತರ ನಿಮ್ಮ Dashboardನಲ್ಲಿ ಕಾಣುವ Settings ಲಿಂಕ್ ಒತ್ತಿರಿ.
ನಂತರ ಸೆಟ್ಟಿಂಗ್ಸ್ನಲ್ಲಿ Email & Mobile ಟ್ಯಾಬ್ ಒತ್ತಿರಿ.
ಅಲ್ಲಿ Posting Options ಕೆಳಗೆ Email Posting Address(Also known as Mail2Blogger) ಎಂದಿರುತ್ತದೆ.
ಅಲ್ಲಿ ಮೊದಲ ಅರ್ಧಭಾಗ ನಿಮ್ಮ ಗೂಗಲ್ ಐಡಿ ಇರುತ್ತದೆ. ಉತ್ತರಾರ್ಧದಲ್ಲಿ ಅಂದರೆ ಡಾಟ್ ಆದ ನಂತರ ಇರುವ ಬಾಕ್ಸ್ನಲ್ಲಿ ಒಂದು ಗುಪ್ತವಾದ ಪದ ನೀಡಿರಿ. ಆದರೆ ಆ ಪದ ಬೇರೆಯವರಿಗೆ ಗೊತ್ತಾಗದಂತೆ ಎಚ್ಚರವಹಿಸಿ. ನಂತರ ಅಲ್ಲಿ ಮೂರು ಆಯ್ಕೆಗಳಿರುತ್ತವೆ.
ಮೊದಲನೆಯದು "ಇಮೇಲ್ಗಳನ್ನು ತಕ್ಷಣವೇ ಪೋಸ್ಟ್ ಮಾಡಿ"
ಎರಡನೆಯದು "ಇಮೇಲ್ಗಳನ್ನು ಡ್ರಾಫ್ಟ್ ರೀತಿ ಸೇವ್ ಮಾಡಿ"
ಮೂರನೆಯದು "ಈ ಸೌಲಭ್ಯ ಬೇಡ"
ನಿಮ್ಮ ಮೇಲ್ಗಳು ತಕ್ಷಣವೇ ನಿಮ್ಮ ಬ್ಲಾಗ್ನಲ್ಲಿ ಬರಬೇಕೆಂದರೆ ಮೊದಲನೆಯದನ್ನು ಆರಿಸಿ. ನಂತರ Save Settings ಒತ್ತಿರಿ. ಅಲ್ಲಿಗೆ ನಿಮಗೊಂದು mail2blogger ಐಡಿ ಸಿದ್ಧವಾಗುತ್ತದೆ. ಉದಾ:yourgoogleID.secretword@blogger.com.
ನಂತರ ಈ ಮೇಲ್ ಐಡಿಗೆ ನಿಮ್ಮ ಮೇಲ್ ಕಳುಹಿಸಿದರೆ ಅದು ನಿಮ್ಮ ಬ್ಲಾಗ್ನಲ್ಲಿ ಪೋಸ್ಟಾಗುತ್ತದೆ. ಇದೇ ರೀತಿ ನಿಮ್ಮೆಲ್ಲಾ ಬ್ಲಾಗ್ಗಳಿಗೂ ಒಂದೊಂದು ಐಡಿ ಪಡೆದುಕೊಂಡರೆ ಎಲ್ಲಾ ಬ್ಲಾಗ್ಗಳಿಗೂ ಒಮ್ಮೆಲೇ ಲೇಖನಗಳನ್ನು ಪೋಸ್ಟ್ ಮಾಡಬಹುದು. ಆದರೆ ಈ ಇಮೇಲ್ ಐಡಿ ಯಾರಿಗೂ ದೊರಕದಂತೆ ನೋಡಿಕೊಳ್ಳಿ. ಏಕೆಂದರೆ ನಿಮ್ಮ ಈ ಐಡಿ ಗೊತ್ತಾದರೆ ಯಾರುಬೇಕಾದರೂ ನಿಮ್ಮ ಬ್ಲಾಗ್ನಲ್ಲಿ ಏನು ಬೇಕಾದರೂ ಬರೆಯಬಹುದು. ಆದ್ದರಿಂದ ಈ ಸೌಲಭ್ಯ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದಿರುವುದು ಅವಶ್ಯ.
ಇನ್ನು ಮೇಲ್ ಕಳುಹಿಸುವಾಗ ಒಂದು ಸೂಚನೆ. ನೀವು ನಿಮ್ಮ ಲೇಖನಗಳನ್ನು ಇಮೇಲ್ ಮೂಲಕ ಬ್ಲಾಗರ್ ಜೊತೆ ಬೇರೆಯವರಿಗೂ ಹಳುಹಿಸುತ್ತಿದ್ದಲ್ಲಿ ನಿಮ್ಮ ಬ್ಲಾಗರ್ ಐಡಿಯನ್ನು To address ಎಂಬಲ್ಲಿ ಬರೆಯದೇ BCC ಎಂಬಲ್ಲಿ ಬರೆಯಿರಿ. ಏಕೆಂದರೆ To address ಜಾಗದಲ್ಲಿ ಬರೆದರೆ ನಿಮ್ಮ ಐಡಿ ಬೇರೆಯವರಿಗೂ ದೊರೆಯಬಹುದು. ಒಂದುವೇಳೆ ಬೇರೆಯವರಿಗೆ ನಿಮ್ಮ ಬ್ಲಾಗರ್ ಐಡಿ ಗೊತ್ತಾಗಿದೆ ಎಂಬ ಅನುಮಾನ ಬಂದರೆ ಕೂಡಲೇ ಬ್ಲಾಗರ್ನ ಸೆಟ್ಟಿಂಗ್ಸ್ನಲ್ಲಿ ನಿಮ್ಮ ಸೀಕ್ರೆಟ್ ವರ್ಡ್ ಬದಲಾಯಿಸಿ.
ಎರಡನೆಯದು "ಇಮೇಲ್ಗಳನ್ನು ಡ್ರಾಫ್ಟ್ ರೀತಿ ಸೇವ್ ಮಾಡಿ"
ಮೂರನೆಯದು "ಈ ಸೌಲಭ್ಯ ಬೇಡ"
ನಿಮ್ಮ ಮೇಲ್ಗಳು ತಕ್ಷಣವೇ ನಿಮ್ಮ ಬ್ಲಾಗ್ನಲ್ಲಿ ಬರಬೇಕೆಂದರೆ ಮೊದಲನೆಯದನ್ನು ಆರಿಸಿ. ನಂತರ Save Settings ಒತ್ತಿರಿ. ಅಲ್ಲಿಗೆ ನಿಮಗೊಂದು mail2blogger ಐಡಿ ಸಿದ್ಧವಾಗುತ್ತದೆ. ಉದಾ:yourgoogleID.secretword@blogger.com.
ನಂತರ ಈ ಮೇಲ್ ಐಡಿಗೆ ನಿಮ್ಮ ಮೇಲ್ ಕಳುಹಿಸಿದರೆ ಅದು ನಿಮ್ಮ ಬ್ಲಾಗ್ನಲ್ಲಿ ಪೋಸ್ಟಾಗುತ್ತದೆ. ಇದೇ ರೀತಿ ನಿಮ್ಮೆಲ್ಲಾ ಬ್ಲಾಗ್ಗಳಿಗೂ ಒಂದೊಂದು ಐಡಿ ಪಡೆದುಕೊಂಡರೆ ಎಲ್ಲಾ ಬ್ಲಾಗ್ಗಳಿಗೂ ಒಮ್ಮೆಲೇ ಲೇಖನಗಳನ್ನು ಪೋಸ್ಟ್ ಮಾಡಬಹುದು. ಆದರೆ ಈ ಇಮೇಲ್ ಐಡಿ ಯಾರಿಗೂ ದೊರಕದಂತೆ ನೋಡಿಕೊಳ್ಳಿ. ಏಕೆಂದರೆ ನಿಮ್ಮ ಈ ಐಡಿ ಗೊತ್ತಾದರೆ ಯಾರುಬೇಕಾದರೂ ನಿಮ್ಮ ಬ್ಲಾಗ್ನಲ್ಲಿ ಏನು ಬೇಕಾದರೂ ಬರೆಯಬಹುದು. ಆದ್ದರಿಂದ ಈ ಸೌಲಭ್ಯ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದಿರುವುದು ಅವಶ್ಯ.
ಇನ್ನು ಮೇಲ್ ಕಳುಹಿಸುವಾಗ ಒಂದು ಸೂಚನೆ. ನೀವು ನಿಮ್ಮ ಲೇಖನಗಳನ್ನು ಇಮೇಲ್ ಮೂಲಕ ಬ್ಲಾಗರ್ ಜೊತೆ ಬೇರೆಯವರಿಗೂ ಹಳುಹಿಸುತ್ತಿದ್ದಲ್ಲಿ ನಿಮ್ಮ ಬ್ಲಾಗರ್ ಐಡಿಯನ್ನು To address ಎಂಬಲ್ಲಿ ಬರೆಯದೇ BCC ಎಂಬಲ್ಲಿ ಬರೆಯಿರಿ. ಏಕೆಂದರೆ To address ಜಾಗದಲ್ಲಿ ಬರೆದರೆ ನಿಮ್ಮ ಐಡಿ ಬೇರೆಯವರಿಗೂ ದೊರೆಯಬಹುದು. ಒಂದುವೇಳೆ ಬೇರೆಯವರಿಗೆ ನಿಮ್ಮ ಬ್ಲಾಗರ್ ಐಡಿ ಗೊತ್ತಾಗಿದೆ ಎಂಬ ಅನುಮಾನ ಬಂದರೆ ಕೂಡಲೇ ಬ್ಲಾಗರ್ನ ಸೆಟ್ಟಿಂಗ್ಸ್ನಲ್ಲಿ ನಿಮ್ಮ ಸೀಕ್ರೆಟ್ ವರ್ಡ್ ಬದಲಾಯಿಸಿ.
-ಪ್ರಸನ್ನ.ಶಂಕರಪುರ
ನಿಮ್ಮ ಕಂಪ್ಯೂಟರ್ ಹೈಬರ್ನೇಟ್ ಮಾಡಿಡಿ
ನೀವು ನಿಮ್ಮ ಕಂಪ್ಯೂಟರ್ನ್ನು ಟರ್ನ್ ಆಫ್ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ. ಅಲ್ಲದೇ ಹೈಬರ್ನೇಟ್ ಮಾಡಿಡುವುದರಿಂದ ಎಲ್ಲಾ ಅಪ್ಲಿಕೇಷನ್ಗಳನ್ನು ಮತ್ತೊಮ್ಮೆ ಪ್ರಾರಂಭ ಮಾಡಬೇಕಾಗುವುದಿಲ್ಲ.
ಈಗ ಹೈಬರ್ನೇಟ್ ಮಾಡುವುದು ಹೇಗೆಂದು ನೋಡೋಣ. ಮೊದಲು Control Panel (start-->Control Panel) ಗೆ ಹೋಗಿ.
ಅಲ್ಲಿ Power options ಓಪನ್ ಮಾಡಿ, ಅಲ್ಲಿ Hibernate ಟ್ಯಾಬ್ ಕ್ಲಿಕ್ ಮಾಡಿ. ಕೆಳಗೆ Enable Hibernation ಎಂಬುದನ್ನು ಸೆಲೆಕ್ಟ್ ಮಾಡಿ. Disk space for Hibernation ಎಂಬಲ್ಲಿ ಸಾಕಷ್ಟು ಖಾಲಿ ಜಾಗ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ Apply ಬಟನ್ ಒತ್ತಿರಿ.
ಅದಾದಮೇಲೆ Advanced ಟ್ಯಾಬ್ ಕ್ಲಿಕ್ ಮಾಡಿ.
ಅಲ್ಲಿ When I press the power button on my computer ಎಂಬಲ್ಲಿ Hibernate ಆರಿಸಿ OK ಒತ್ತಿರಿ. ಜೊತೆಗೆ Prompt for password when computer resumes from standby ಎನ್ನುವುದು ಸೆಲೆಕ್ಟ್ ಆಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇದು ಸೆಲೆಕ್ಟ್ ಆಗಿದ್ದರೆ Windows resume ಅದಮೇಲೆ ಪಾಸ್ವರ್ಡ್ ಇದ್ದರೆ ಅದನ್ನು ಕೊಡಬೇಕಾಗುತ್ತದೆ ಇಲ್ಲದಿದ್ದರೆ ಯೂಸರ್ನೇಮ್ನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಇದಿಷ್ಟು ಮೊದಲನೇ ಹಂತದ ಕೆಲಸಗಳು. ಈಗ ಹೈಬರ್ನೇಟ್ ಹೇಗೆ ಮಾಡಬಹುದು ಎಂದು ನೋಡೋಣ. ಇದನ್ನು ಮೂರು ರೀತಿ ಮಾಡಬಹುದು.
ಮೊದಲನೇ ರೀತಿ: When I press the power button on my computer ಎಂಬಲ್ಲಿ Hibernate ಆಯ್ಕೆಯನ್ನು ಆರಿಸಿರುವುದರಿಂದ ನಿಮ್ಮ ಕಂಪ್ಯೂಟರ್ ಆನ್ ಆಗಿದ್ದಾಗ CPUನಲ್ಲಿ ಪವರ್ ಗುಂಡಿ ಒತ್ತಿದರೆ ಕಂಪ್ಯೂಟರ್ ಹೈಬರ್ನೇಟ್ ಆಗುತ್ತದೆ.
ಎರಡನೇ ರೀತಿ: Turn off computer ಕೊಟ್ಟ ನಂತರ ಕೀಬೋರ್ಡ್ನಲ್ಲಿ shift ಗುಂಡಿ ಒತ್ತಿ ಹಿಡಿಯಿರಿ, ಆಗ Stand By ಜಾಗದಲ್ಲಿ Hibernate ಎಂದು ಬರುತ್ತದೆ. ಅದನ್ನು ಕ್ಲಿಕ್ಕಿಸುವುದರ ಮೂಲಕ ಹೈಬರ್ನೇಟ್ ಮಾಡಬಹುದು.
ಮೂರನೆಯ ರೀತಿ: ಡೆಸ್ಕ್ಟಾಪ್ನಲ್ಲಿ ರೈಟ್ ಕ್ಲಿಕ್ ಮಾಡಿ, New-->Shortcut ಸೆಲೆಕ್ಟ್ ಮಾಡಿ.
Type the location of the item ಎಂಬ ಜಾಗದಲ್ಲಿ ಈ ಕೆಳಗಿನ ಸಾಲುಗಳನ್ನು ಪೇಸ್ಟ್ ಮಾಡಿ.
rundll32.exe PowrProf.dll, SetSuspendState
ನಂತರ Next ಬಟನ್ ಒತ್ತಿರಿ.
Type a name for this shortcut ಜಾಗದಲ್ಲಿ Hibernate ಎಂದು ಕೊಟ್ಟು Finish ಒತ್ತಿರಿ.
ಈಗ ನಿಮ್ಮ ಡೆಸ್ಕ್ಟಾಪ್ನಲ್ಲಿ Hibernate ಎಂಬ ಐಕಾನ್ ಇರುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿದರೆ ಕಂಪ್ಯೂಟರ್ ಹೈಬರ್ನೇಟ್ ಆಗುತ್ತದೆ.
ಅದೇ ರೀತಿ ಮೂರನೇ ವಿಧಾನದಲ್ಲಿ Type the location of the item ಎಂಬ ಜಾಗದಲ್ಲಿ
shutdownಗೆ SHUTDOWN -s -t 01
ಹಾಗೂ restartಗೆ SHUTDOWN -r -t 01
ಬಳಸಬಹುದು.
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲು ಸಂಪದದಲ್ಲಿ ಪ್ರಕಟವಾಗಿದೆ. ಆ ಲೇಖನ ಹಾಗೂ ಕಾಮೆಂಟುಗಳನ್ನು ಇಲ್ಲಿ ಓದಬಹುದು.
http://sampada.net/article/26919
ಹಾಟ್ಮೇಲ್ನಲ್ಲಿ ನಿಮ್ಮ Gmailನ ಮೇಲ್ಗಳನ್ನು ಓದಬಹುದು
ನೀವು ನಿಮ್ಮ ಹಾಟ್ಮೇಲ್ ಅಥವಾ ಲೈವ್ ಅಕೌಂಟ್ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್ಮೇಲ್ ಅಕೌಂಟ್ನ ಮೇಲ್ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್ಮೇಲ್ ಅಥವಾ ಲೈವ್ ಅಕೌಂಟಿಗೆ ಲಾಗಿನ್ ಆಗಿರಿ.
ನಂತರ ಎಡಬದಿಯಲ್ಲಿ ಕಾಣುವ Add an email account ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ E-mail address ಜಾಗದಲ್ಲಿ ನಿಮ್ಮ ಜಿಮೇಲ್ address ಟೈಪ್ ಮಾಡಿ. ಉದಾ: example123@gmail.com. ನಂತರ ಪಾಸ್ವರ್ಡ್ ಜಾಗದಲ್ಲಿ ನಿಮ್ಮ ಪಾಸ್ವರ್ಡ್ ನೀಡಿ Next ಬಟನ್ ಕ್ಲಿಕ್ ಮಾಡಿ.
ಈಗ ನಿಮ್ಮ ಮೇಲ್ಗಳು ಎಲ್ಲಿ ಇರಬೇಕೆಂದು ಸೂಚಿಸಿ. ನಿಮ್ಮ Inboxನಲ್ಲಿಯೇ ಸಿಗಬೇಕೆಂದಾದರೆ Your inboxನ್ನು ಆಯ್ಕೆ ಮಾಡಿ. ಇಲ್ಲದಿದ್ದಲ್ಲಿ A separate folder, called ಎಂಬುದನ್ನು ಆಯ್ಕೆ ಮಾಡಿ ನಿಮಗಿಷ್ಟವಾದ ಹೆಸರು ನೀಡಿ. ಉದಾ: Gmail-1. ನಂತರ Save ಬಟನ್ ಕ್ಲಿಕ್ಕಿಸಿ.
ನಂತರ ನಿಮ್ಮ Gmail ಅಕೌಂಟಿಗೆ ಲಾಗಿನ್ ಆಗಿ ಹಾಟ್ಮೇಲ್ನಿಂದ ಬಂದಿರುವ ಒಂದು ಲಿಂಕ್ (URL) ಕ್ಲಿಕ್ ಮಾಡಿ. ಆಗ ನೀವು ಹಾಟ್ಮೇಲ್ನಿಂದಲೇ ಜಿಮೇಲ್ನ mailಗಳನ್ನು ನೋಡಲಿಕ್ಕೆ ಸಾದ್ಯವಾಗುತ್ತದೆ.
ನಿಮ್ಮ hotmail inboxನ ಕೆಳಬದಿಯಲ್ಲಿ ಕಾಣುವ ಫೋಲ್ಡರ್ನ್ನು(Gmail ಅಥವಾ ನೀವಿಟ್ಟ ಹೆಸರು) ಕ್ಲಿಕ್ ಮಾಡಿದರೆ ಆಯ್ತು, ನಿಮ್ಮ Gmail ಮೇಲ್ಗಳನ್ನು ನೋಡಬಹುದು.
ಈ ಸೌಲಭ್ಯವನ್ನು ಬಳಸಿ ನಿಮ್ಮ Yahoo! mail classic ನ ಮೇಲ್ಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ನೀವು Yahoo! Mail Plus ಉಪಯೋಗಿಸುತ್ತಿದ್ದಲ್ಲಿ ನಿಮ್ಮ Yahoo! ಮೇಲ್ಗಳನ್ನು ಹಾಟ್ಮೇಲ್ ಮೂಲಕ ವೀಕ್ಷಿಸಬಹುದು.
ಈ ಸೌಲಭ್ಯವನ್ನು ಬಳಸಿ ನಿಮ್ಮ Yahoo! mail classic ನ ಮೇಲ್ಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ನೀವು Yahoo! Mail Plus ಉಪಯೋಗಿಸುತ್ತಿದ್ದಲ್ಲಿ ನಿಮ್ಮ Yahoo! ಮೇಲ್ಗಳನ್ನು ಹಾಟ್ಮೇಲ್ ಮೂಲಕ ವೀಕ್ಷಿಸಬಹುದು.
ಇದೇ ರೀತಿ ನೀವು ಐದಾರು gmail ಅಥವಾ hotmail ಅಕೌಂಟ್ಗಳನ್ನು add ಮಾಡಬಹುದು.
-ಪ್ರಸನ್ನ.ಶಂಕರಪುರ.
SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡೆಯಿರಿ
ನೀವು ಹಾಟ್ಮೇಲ್ ಅಥವಾ ಲೈವ್ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್ಗಳನ್ನು ನಿಮ್ಮ ಮೊಬೈಲ್ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.
ಅಲ್ಲಿ ನಿಮ್ಮ user name ಹಾಗೂ password ಕೊಟ್ಟು Sign in ಆಗಿರಿ.
ನಂತರ ಅಲ್ಲಿ ಕೊಟ್ಟಿರುವ ಜಾಗದಲ್ಲಿ +91ಸೇರಿಸಿ ನಿಮ್ಮ ಮೊಬೈಲ್ ನಂಬರ್ ಟೈಪಿಸಿ. ಉದಾ: +919400024365
ನಂಬರ್ ಕೊಟ್ಟ ನಂತರ Next ಬಟನ್ ಒತ್ತಿರಿ.
ನಂಬರ್ ಕೊಟ್ಟ ನಂತರ Next ಬಟನ್ ಒತ್ತಿರಿ.
ಈಗ ನಿಮ್ಮ ಮೊಬೈಲ್ಗೆ ಒಂದು ಸಂದೇಶ ಬರುತ್ತದೆ. ಅವರು ಕಳುಹಿಸಿರುವ ಸಂದೇಶದಲ್ಲಿ ಒಂದು verification code ಇರುತ್ತದೆ.(ಉದಾ:4873). ಅದನ್ನು ಮೇಲಿನ ಬಾಕ್ಸ್ನಲ್ಲಿ ಟೈಪಿಸಿ Next ಬಟನ್ ಕ್ಲಿಕ್ಕಿಸಿ.
ನಂತರ Save ಬಟನ್ ಒತ್ತಿರಿ. ಈಗ ನಿಮ್ಮ inboxಗೆ ಬರುವ ಮೇಲ್ಗಳು ನಿಮ್ಮ ಮೊಬೈಲ್ಗೂ ಬರುತ್ತದೆ. ಆದರೆ ಪೂರ್ತಿ ಮೇಲ್ SMS ಮೂಲಕ ಬರುವುದಿಲ್ಲ. ಮೇಲ್ನ ವಿಷಯ ಹಾಗೂ matterನ ಒಂದೆರಡು ಲೈನ್ಗಳು ಮಾತ್ರ ಉಚಿತವಾಗಿ ಬರುತ್ತದೆ. ನೀವು ಆ ಮೇಲ್ನ್ನು ಇನ್ನೂ ನೋಡಬೇಕೆಂದರೆ ಆ ನಂಬರ್ಗೆ M ಎಂದು ರಿಪ್ಲೇ ಮಾಡಬೇಕು. ಆದರೆ ನೆನಪಿಡಿ ಹೀಗೆ ನೀವು ರಿಪ್ಲೇ ಮಾಡಿದಾಗ ಅವರು ಮತ್ತೊಂದು SMS ಕಳುಹಿಸುವುದಕ್ಕೆ ಸುಮಾರಾಗಿ 1.50 ರೂ. ದರ ವಿಧಿಸುತ್ತಾರೆ. ನೀವು ಇದನ್ನು ಯಾವುದಾದರೂ ತುರ್ತು ಸಂದೇಶಗಳನ್ನು ನೋಡಲು ಬಳಸಬಹುದು.
-ಪ್ರಸನ್ನ.ಶಂಕರಪುರ
-ಪ್ರಸನ್ನ.ಶಂಕರಪುರ
ಮೇಲಿನ ಲೇಖನ ಈ ಮೊದಲು ಸಂಪದದಲ್ಲಿ ಪ್ರಕಟವಾಗಿದೆ. ಆ ಲೇಖನ ಹಾಗೂ ಕಾಮೆಂಟುಗಳನ್ನು ಇಲ್ಲಿ ಓದಬಹುದು.
http://sampada.net/article/26324
Subscribe to:
Posts (Atom)