ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)
(ಇಲ್ಲಿರುವ ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.
ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert). ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.
ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.
ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.
ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.
ಈ ವಿಷಯವಾಗಿ ಏನಾದರೂ ಸಂದೇಹಗಳಿದ್ದರೆ ಪ್ರಶ್ನೆಗಳನ್ನು ಕೇಳಿ, ಪರಿಹರಿಸುವ ಪ್ರಯತ್ನ ಮಾಡುವೆ.
ಧನ್ಯವಾದಗಳೊಂದಿಗೆ,
ಪ್ರಸನ್ನ.ಎಸ್.ಪಿ
ನುಡಿಯಲ್ಲಿ ನೇರವಾಗಿ ಯುನಿಕೋಡ್ ನಲ್ಲಿ ಬರೆಯಲು ಇನ್ನೂ ಸಾಧ್ಯವಿಲ್ಲವೇ. ಖಂಡಿತವಾಗಿಯೂ ಈ ಅಂಶವನ್ನು ನುಡಿ ತಂತ್ರಜ್ಞಾನ ತಯಾರಕರು ಗಮನಿಸಲೇಬೇಕು.
ReplyDelete@ಮಹೇಶ, ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನುಡಿಯಲ್ಲಿ ನೇರವಾಗಿ ಯೂನಿಕೋಡ್‌ನಲ್ಲಿ ಬರೆಯಲು ಸಾಧ್ಯವಿಲ್ಲ. ಆದರೆ ನುಡಿ(4.0) ಡೈರೆಕ್ಟ್ ಬಳಸಿ ಯೂನಿಕೋಡ್‌ನಲ್ಲಿ ಬರೆಯಬಹುದು. ನುಡಿ 3.0 ದಲ್ಲಿ ಯೂನಿಕೋಡ್ ಲಭ್ಯವಿಲ್ಲ.
ReplyDeleteಕನ್ನಡದಲ್ಲಿ ಕಂಪೂಟರ್ ಬ್ಲಾಗ್ ನೋಡಿ ಖುಶಿಯಾಯಿತು. ಅಭಿನಂದನೆಗಳು. ನುಡಿಯಲ್ಲಿರುವ ಕಗಪ ಕೀಬೋರ್ಡ್ ಗಿಂತ ಬರಹದಲ್ಲಿರುವ ಕಗಪ ಕೀಬೋರ್ಡ್ ಬಳಸಲು ಹೆಚ್ಚು ಅನುಕೂಲವಾಗಿದೆ.
ReplyDelete-ರಾಜಶೇಖರ್
nudiyalli baredivudannu nucode badalayisuva vidhana gothayithu thumba dhanyavadagalu
ReplyDeletebarahadalliruvudannu hege nudige badalayisuvudu antha thilisi. namaskara
lakshmi, gundlupet.
ನಿಮ್ಮ ಬ್ಲಾಗ್ ಚೆನ್ನಾಗಿದೆ ತು೦ಬಾ ಮಾಹಿತಿ ಸಿಕ್ಕಿತು.
ReplyDeletebaraha 10.4nalli nivu helida option kanthilla sir..
ReplyDeleteಮಾನ್ಯರೇ,
ReplyDeleteನುಡಿಯಿಂದಲೇ ಸುಲಭವಾಗಿ ಯುನಿಕೋಡ್ ಗೆ ಪರಿವರ್ತಿಸಬಹುದಲ್ಲ. ಸುತ್ತಿ ಬಳಸಿ ಬರುವುದದೇಕೆ???
ನುಡಿ ಡೈರೆಕ್ಟ ಮೂಲಕ ನೇರವಾಗಿ ಯುನಿಕೋಡ್ ನಲ್ಲಿ ಬರೆಯಬಹುದು..
ನೋಟ್ ಪ್ಯಾಡಿನಲ್ಲಿ ನೇರವಾಗಿ ಸೇವ್ ಮಾಡಿದರೆ ಯುನಿಕೋಡ್ ಪಠ್ಯ ಉಳಿಯುವುದಿಲ್ಲ. ಏಕೆಂದರೆ ಅದು ANSI ಸೆಟ್ಟಿಂಗ್ ನಲ್ಲಿರುತ್ತದೆ. ಹಾಗಾಗಿ save ಮಾಡಿದಾಗ (ಅಥವಾ save as) ನೋಟ್ ಪ್ಯಾಡಿನಲ್ಲಿ ಕೆಳಗೆ unicode ಆಯ್ಕೆ ಮಾಡಿಕೊಳ್ಳಬೇಕು.
ReplyDelete(ನನ್ನ ಸಂಗ್ರಹದಲ್ಲಿತ್ತು ಈ ಪೋಸ್ಟ್, ಹಾಗಾಗಿ ಹಳೇ ಪೋಸ್ಟಿಗೆ ಈಗ ಕಮೆಂಟಿಸುತ್ತಿದ್ದೇನೆ. )! :)
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
ReplyDelete