Thursday, August 19, 2010

"ಐ-ಸುಧಾ" - ಒಂದು ಐ-ಫೋನ್ ಅಪ್ಲಿಕೇಶನ್

ಗೆಳೆಯರೆ,
ಸುಧಾ ಮ್ಯಾಗಝೀನ್ ನಿಮಗೆಲ್ಲ ತಿಳಿದಿರಬಹುದು. ಈ ನನ್ನ ನೆಚ್ಚಿನ ಸುಧಾ ಮ್ಯಾಗಝೀನಿಗೋಸ್ಕರ ಐ-ಸುಧಾ ಎನ್ನುವಂತಹ ಒಂದು ಐ-ಫೋನ್ ಅಪ್ಲಿಕೇಶನ್ ಅನ್ನು ಬರೆದಿದ್ದೇನೆ. ಇಂದಿನಿಂದ ಅದು, Apple App Store ನಿಂದ ಲಭ್ಯವಾಗಲಿದೆ.

ಇದರ ಪ್ರಯೋಜನಗಳು ಇಂತಿವೆ

೧. ಯಾವುದೇ ತಾಂತ್ರಿಕ ಅಡಚಣೆಗಳೂ ನಿಮ್ಮನ್ನು ಕಾಡವು. 
೨. ಪ್ರಸ್ತುತ ವಾರದಿಂದ ಹಿಡಿದು ಹಿಂದಿನ ಮೂರು ವರ್ಷಗಳ ತನಕದ ಸುಧಾವನ್ನು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಓದಬಹುದು.
೩. ಪುಟಗಳ ನಾವಿಗೇಶನ್ ಅನ್ನು ಸುಲಭವಾಗಿ, ಸ್ಕ್ರಬಿಂಗ್ ಮೂಲಕ ಮಾಡಬಹುದು. ಬಲದಿಂದ ಎಡಕ್ಕೆ ಸ್ಕ್ರಬಿಂಗ್ ಮಾಡಿದರೆ ಮುಂದಿನ ಪುಟ ಮತ್ತು ಎಡದಿಂದ ಬಲಕ್ಕೆ ಸ್ಕ್ರಬಿಂಗ್ ಮಾಡಿದರೆ ಹಿಂದಿನ ಪುಟ ಲೋಡ್ ಆಗುವುದು.
೪. ಯಾವುದೇ ಪುಟದ ಅಕ್ಷರಗಳು ಸರಿಯಾಗಿ ಕಾಣದಿದ್ದಲ್ಲಿ, ಎರಡೇ ಎರಡು ಬೆರಳುಗಳ ನೆರವಿನಿಂದ ಅಕ್ಷರಗಳ ಗಾತ್ರವನ್ನು ಹಿಗ್ಗಿಸಬಹುದು, ಹಾಗೆಯೇ ಕುಗ್ಗಿಸಲೂ ಬಹುದು.
೫. ಈ ಅಪ್ಲಿಕೇಶನ್ನಿನ ಬಹುಮುಖ್ಯ ಉಪಯೋಗವೆಂದರೆ, ಇಂಟರ್ನೆಟ್ ಇಲ್ಲದಿರುವ ಕಡೆಯೂ ಇದರ ಬಳಕೆ. ನೀವು ಒಮ್ಮೆ ಒಂದು ಪುಟವನ್ನು ಓದಿದೆವೆಂದರೆ, ಆ ಪುಟ ಐ-ಪೋನಿನಲ್ಲಿ ಸೇವ್ ಆಗಿರುತ್ತದೆ. ಹಾಗಾಗಿ, ನೀವು ಬಸ್ಸಿನಲ್ಲಿಯೋ, ಆಟೋದಲ್ಲಿಯೂ, ಅಥವಾ ಟ್ರೈನಿನಲ್ಲಿಯೋ ಹೋಗುವಾಗ, ಈಗ ಸುಧಾ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೊರಗಬೇಕಿಲ್ಲ. ನಿಮ್ಮ ಫೋನಿನಲ್ಲಿ ನಿಮ್ಮ ನೆಚ್ಚಿನ ಮ್ಯಾಗಝೀನ್ ಅನ್ನು ಯಾವಾಗಲೂ ಓದಬಹುದು.

ಕೆಲವು ಸ್ಕ್ರೀನ್-ಶಾಟ್ಸ್

 




















(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ನಿಮಗೆ ಈ ಅಪ್ಲಿಕೇಶನ್ ಇಷ್ಟವಾಯಿತೇ ? ಏನಾದರೂ ಸಲಹೆಗಳಿದ್ದರೆ ತಿಳಿಸಿ, ಇನ್ನೂ ಉತ್ತಮಪಡಿಸುವತ್ತು ಪ್ರಯತ್ನಿಸಬಹುದು.

ನನ್ನಿ.

ಇದರ ಮೂಲ ಲೇಖಕರು: ಸುನಿಲ್ ಜಯಪ್ರಕಾಶ್ ಹಾಗೂ ಈ ಅಪ್ಲಿಕೇಶನ್ನನ್ನು ಬರೆದವರೂ ಅವರೇ. ಸಂಪದದಲ್ಲಿ ಈ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ, ಸಂಪದದಲ್ಲಿ ಈ ಅಪ್ಲಿಕೇಶನ್ನಿನ ಡೆಮೋ ನೋಡಬಹುದು.

Tuesday, August 10, 2010

ಉಬುಂಟು dual boot

ವಿಂಡೋಸ್ ಹಾಗೂ ಉಬುಂಟು dual bootನಲ್ಲಿ, ಮೊದಲು ವಿಂಡೋಸ್ ಇನ್ಸ್‌ಟಾಲ್ ಮಾಡಿ ನಂತರ ಉಬುಂಟು ಇನ್ಸ್‌ಟಾಲ್ ಮಾಡಿದ್ದರೆ, ಉಬುಂಟು default ಆಪರೇಟಿಂಗ್ ಸಿಸ್ಟಮ್ ಆಗಿರುತ್ತದೆ. ಹಾಗಾಗಿ ಪ್ರತಿ ಸಲ ಕಂಪ್ಯೂಟರ್‍ ಆನ್ ಮಾಡಿದಾಗ default OS ಆದ ಉಬುಂಟು ಬೂಟ್ ಆಗುತ್ತದೆ. ನಿಮಗೆ ವಿಂಡೋಸ್ ಬೂಟ್ ಆಗಬೇಕೆಂದರೆ, ಉಬುಂಟು ಬೂಟ್ ಆಗುವ ಮೊದಲೇ ವಿಂಡೋಸ್‌‌ನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತೀ ಸಲ ವಿಂಡೋಸ್‌‌‌ನ್ನು ಸೆಲೆಕ್ಟ್ ಮಾಡುವ ಬದಲು ವಿಂಡೋಸ್‌‌ನ್ನು default OS ಆಗಿ ಸೆಲೆಕ್ಟ್ ಮಾಡಲು menu.lst ಫೈಲ್‌‌ನ್ನು ಎಡಿಟ್ ಮಾಡಬಹುದು. ಆದರೆ ಅದರಲ್ಲಿ ಸ್ವಲ್ಪ ಎಡವಟ್ಟಾದರೂ ಆಮೇಲೆ ಯಾವ ಆಪರೇಟಿಂಗ್ ಸಿಸ್ಟಮ್ ಕೂಡಾ ಬೂಟ್ ಆಗುವುದಿಲ್ಲ. ಹಾಗಾಗಿ ವಿಂಡೋಸ್‌‌ನ್ನು default OS ಆಗಿ ಆರಿಸಲು ಒಂದು ಸರಳ ಹಾಗೂ ಸುರಕ್ಷಿತ ವಿಧಾನವಿದೆ.

ನಿಮ್ಮ ಉಬುಂಟು ಸಿಸ್ಟಮ್‌ನ್ನು ಇಂಟರ್‌‌ನೆಟ್‌‌ಗೆ ಕನೆಕ್ಟ್ ಮಾಡಿ. ನಂತರ ಟರ್ಮಿನಲ್ ಓಪನ್ ಮಾಡಿ ಈ ಕೆಳಗಿನ ಕಮ್ಯಾಂಡನ್ನು ರನ್ ಮಾಡಿ :

$ sudo apt-get install startupmanager

startup manager ಇನ್ಸ್‌ಟಾಲ್ ಆದ ನಂತರ, ಆ ತಂತ್ರಾಂಶವನ್ನು ಉಪಯೋಗಿಸಿ ವಿಂಡೋಸ್‌ನ್ನು default OS ಆಗಿ ಆರಿಸಬಹುದು.

(ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌‌ಶಾಟ್‌ಗಳನ್ನು ಹಾಕುವ ಪ್ರಯತ್ನ ಮಾಡುವೆ)

Saturday, August 07, 2010

ಕಿರುದಾರಿಗಳಿವೆ ಗಮನಿಸಿ!

ಅ.ರಾ. ಮಿತ್ರರು ತಮ್ಮ ಪ್ರಬಂಧದವೊಂದರಲ್ಲಿ ಕಿರುದಾರಿಗಳ ಬಗ್ಗೆ ಎಚ್ಚರಿಸಿದ್ದಾರೆ (ಕಿರುದಾರಿಗಳಿವೆ ಎಚ್ಚರಿಕೆ). ಆದರೆ ಈಗ ಗಣಕಯಂತ್ರದಲ್ಲಿ ವೇಗವಾಗಿ ಸಾಗಲು ಕಿರುದಾರಿಗಳು ಬೇಕೇ ಬೇಕು.
ಉದಾಹರಣೆಗೆ ವಿಂಡೋಸ್‌ನಲ್ಲಿ ಬರಹ IMEಯನ್ನು ಓಡಿಸ (run/execute) ಬೇಕಾಗಿದೆ. ಅದಕ್ಕೆ ಸಾಧಾರಣವಾಗಿ ಕಡಿಮೆಯಂದರೂ ಮೌಸ್‌ನಿಂದ ೪ ಚಿಟುಕು (click) ಬೇಕು. ಇದಕ್ಕೆ shortcut ಮಾಡಿದರೆ ಕೆಲಸ ಸುಲಭ.
shortcutನ್ನು ಮಾಡುವದಕ್ಕೆ ತುಂಬಾ ವಿಧಾನಗಳಿವೆ. ಅದರಲ್ಲಿ ಇಲ್ಲಿ ಎರಡು ವಿಧಾನಗಳನ್ನು ಕೊಟ್ಟಿದೆ.

ಮೊದಲನೆಯ ವಿಧಾನ:
೧. ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.
ಉದಾ: Start -> All Programs -> BarahaIME 1.0 -> BarahaIME 1.0


















೨. ಅದರಲ್ಲಿ “Pin to Start menu”ನ್ನು ಚಿಟುಕಿಸಿ.

೩. Start ಗುಂಡಿಯನ್ನು ಚಿಟುಕಿಸಿ. Recent Programs ಮೇಲುಗಡೆ application ಹೆಸರು ಬಂದಿರುತ್ತೆ.



























ಎರಡನೇ ವಿಧಾನ:
೧. ಮೊದಲಿನಂತೆ ಮೆನುವಿನಲ್ಲಿ ನಿಮಗೆ ಬೇಕಾದ application ಮೇಲೆ right click ಮಾಡಿ. ಲಿಸ್ಟ್ ಬರುತ್ತೆ.
ಉದಾ: Start -> All Programs -> BarahaIME 1.0 -> BarahaIME 1.0

೨. ಅದರಲ್ಲಿ Propertiesನ್ನು ಚಿಟುಕಿಸಿ

೩. Properties ಕಿಟಕಿ ಬರುತ್ತೆ.



























೪. ಅದರಲ್ಲಿ Shortcut Key: ಎದುರಿನ ಡಬ್ಬಿ(box)ಯನ್ನು ಚಿಟುಕಿಸಿ.

೫. ಈಗ ನಿಮಗೆ ಬೇಕಾದ ಅಕ್ಷರ (key) ಒತ್ತಿ. ಆ ಅಕ್ಷರ CTRL+ALT ಜೊತೆ ಕಾಣಿಸುತ್ತೆ.
ನಾನು B ಒತ್ತಿದಾಗ, ಚಿತ್ರದಲ್ಲಿ ತೋರಿಸಿರುವಂತೆ “CTRL + ALT + B” ಬಂತು.

೬. OK ಒತ್ತಿ.

ಇನ್ನು ಮೇಲೆ ನಿಮಗೆ application ಓಡಿಸಬೇಕಾದರೆ ಈ shortcut key (ಉದಾ: CTRL+ALT+B) ಒತ್ತಿದರೆ ಸಾಕು, application ತಟ್ಟಂತ ಪ್ರತ್ಯಕ್ಷ!

ಕೊ: ನಿಮಗೆ ಬೇರೆ ಸೇರಿಕೆ(combination) , ಉದಾ: CTRL+SHIFT shortcut ಬೇಕಾದರೆ, ಆ ಸೇರಿಕೆ ಒತ್ತಬೇಕು.
ಹಾಗೆ Function keyಗಳನ್ನೂ ಬಳಸಬಹುದು.

ಕೊಕೊ: ಬೇರೆ applicationನ ಸೇರಿಕೆ, ನೀವು ಕೊಟ್ಟ ಸೇರಿಕೆ ಜೊತೆ ಸಂದಿಗ್ಧತೆ ಇರದಂತೆ ಎಚ್ಚರವಹಿಸಿ.

Wednesday, August 04, 2010

ಭಾರತೀಯರಿಗಾಗಿ ಭಾರತೀಯ ಬ್ರೌಸರ್

"ಭಾರತೀಯರಿಗಾಗಿ ಭಾರತೀಯ ಬ್ರೌಸರ್‍" ಎಂಬ ಸ್ಲೋಗನ್‌‌ನೊಂದಿಗೆ ಬಂದಿದೆ ಎಪಿಕ್ ಬ್ರೌಸರ್‍. ಮೊಝಿಲ್ಲ ಫೈರ್‌‌ಫಾಕ್ಸ್‌‌ನ ಪ್ಲಾಟ್‌‌ಫಾರ್ಮ್‌‌ನಲ್ಲಿಯೇ ನಿರ್ಮಿತವಾಗಿದ್ದರೂ ಫೈರ್‌‌‌ಫಾಕ್ಸ್‌ಗಿಂತ ಸಾಕಷ್ಟು ಭಿನ್ನವಾಗಿದೆ. Anti-virus ಹೊಂದಿರುವುದು ಇದರ ವಿಶೇಷ. 1500ಕ್ಕೂ ಹೆಚ್ಚು ಥೀಮ್ ಹಾಗೂ ವಾಲ್‌ಪೇಪರ್‌‌ಗಳನ್ನು ಆರಿಸಿಕೊಳ್ಳುವ ಅವಕಾಶವಿದೆ. ಇದರಲ್ಲಿ ಸಾಕಷ್ಟು ಉಪಯುಕ್ತ ಸೌಲಭ್ಯಗಳಿವೆ. ಸೈಡ್‌‌ಬಾರ್‍ ಅಪ್ಲಿಕೇಷನ್‌‌ಗಳನ್ನು ಹೊಂದಿದ ಮೊದಲ ಬ್ರೌಸರ್‍ ಇದು. ಯಾವುದೇ ತಂತ್ರಾಂಶದ ಸಹಾಯವಿಲ್ಲದೆ ಈ ಬ್ರೌಸರ್‌‌ನ ಮೂಲಕ ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರೆಯಬಹುದು. ನಿಮ್ಮ ಕಂಪ್ಯೂಟರ್‌‌ನ್ನು ಈ ಬ್ರೌಸರ್‌‌ ಮೂಲಕವೇ ಜಾಲಾಡಬಹುದು. to do list, alerts, stopwatch ಮುಂತಾದ ಸಲಕರಣೆಗಳಿವೆ. ಟ್ವಿಟರ್‍, ಫೇಸ್‌‌ಬುಕ್, ಆರ್ಕುಟ್, ಮುಂತಾದ 1500ಕ್ಕು ಹೆಚ್ಚು ಅಪ್ಲಿಕೇಷನ್‌ಗಳಿವೆ.
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಎಪಿಕ್ ಬ್ರೌಸರ್‌‌‌‌ನ್ನು ಇಲ್ಲಿಂದ ಇಳಿಸಿಕೊಳ್ಳಬಹುದು(ಫೈಲ್ ಸುಮಾರು 10.6 ಎಂಬಿ ಇರುತ್ತದೆ). ಹೆಚ್ಚಿನ ಮಾಹಿತಿ ಇಲ್ಲಿ ದೊರೆಯುತ್ತದೆ.

-ಪ್ರಸನ್ನ.ಎಸ್.ಪಿ

Monday, August 02, 2010

ಟೆಕ್-ಕನ್ನಡಕ್ಕೆ ನಿಮ್ಮ ಸಲಹೆ ಸೂಚನೆಗಳನ್ನು ತಿಳಿಸಿ

ಟೆಕ್-ಕನ್ನಡಕ್ಕೆ ಸಲಹೆ ಸೂಚನೆಗಳು  ಹಾಗೂ ಟೆಕ್-ಕನ್ನಡವನ್ನು ಯಾವ ರೀತಿ ಉತ್ತಮಪಡಿಸಬೇಕು ಎಂಬ ನಿಮ್ಮ ಅಭಿಪ್ರಾಯವನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಅಥವಾ techkannada(at)gmail(dot)com ಗೆ ಒಂದು ಇ-ಅಂಚೆ ಕಳುಹಿಸಿ. ನಾವು ಅದನ್ನು ಪರಿಶೀಲಿಸುತ್ತೇವೆ.

ಧನ್ಯವಾದಗಳೊಂದಿಗೆ,
ಟೆಕ್-ಕನ್ನಡ ಬಳಗ