Wednesday, November 17, 2010

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ ವಿಷಯವಿರುವ ಎಲ್ಲಾ ತಾಣಗಳನ್ನೂ ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಲು ಗೂಗಲ್‌ನಲ್ಲಿ ಸಾಧ್ಯವಾಗುತ್ತದೆ. ಅದಕ್ಕಾಗಿ ಮೊದಲು ಗೂಗಲ್ ತಾಣಕ್ಕೆ ಹೋಗಬೇಕು. ನಂತರ ಸರ್ಚ್‌ಬಾಕ್ಸ್‌ನಲ್ಲಿ ಮೊದಲು "site:ವೆಬ್‌ಸೈಟ್ ವಿಳಾಸ {ಸ್ಪೇಸ್} ವಿಷಯ" ಈ ರೀತಿ ಕೊಟ್ಟು ನಂತರ ಸರ್ಚ್ ಕೊಡಬೇಕು. ಆಗ ನೀವು ಸೂಚಿಸಿದ ನಿರ್ಧಿಷ್ಟ ತಾಣದಿಂದ ಮಾತ್ರ ಫಲಿತಾಂಶಗಳನ್ನು ಗೂಗಲ್ ತೋರಿಸುತ್ತದೆ.

ಉದಾಹರಣೆಗೆ-- site:sampada.net ಲಿನಕ್ಸಾಯಣ ಎಂದು ಕೊಟ್ಟು ಸರ್ಚ್ ಒತ್ತಿದರೆ ಸಂಪದದಲ್ಲಿ ಮಾತ್ರ ಇರುವ ಲಿನಕ್ಸಾಯಣ ಪುಟಗಳನ್ನು ತೋರಿಸುತ್ತದೆ.


(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Monday, November 15, 2010

ಬ್ಲಾಗರ್‍ ಟೆಂಪ್ಲೇಟ್‌ನ್ನು restore ಮಾಡುವ ವಿಧಾನ

ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು.

(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಅದಕ್ಕಾಗಿ ಮೊದಲು ನಿಮ್ಮ ಬ್ಲಾಗರ್‍ ಡ್ಯಾಶ್‌ಬೋರ್ಡ್‌ನಲ್ಲಿ Design ಮೇಲೆ ಕ್ಲಿಕ್ ಮಾಡಿ, ನಂತರ Edit HTML ಒತ್ತಿ.



ಅಲ್ಲಿ Backup / Restore Template ಕೆಳಗೆ Download Full Template ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.



ನಂತರ ಫೈಲ್ ಓಪನ್ ಮಾಡಬೇಕೇ ಅಥವಾ ಸೇವ್ ಮಾಡಬೇಕೆ ಎಂದು ಕೇಳುತ್ತದೆ. ಆಗ Save File ಆಯ್ಕೆಯನ್ನು ಆರಿಸಿ, ನಂತರ Save ಬಟನ್ ಒತ್ತಿ. ಅಲ್ಲಿಗೆ ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಬ್ಲಾಗಿನ ಟೆಂಪ್ಲೇಟ್ ಕೋಡ್ ಇರುವ .xml ಫೈಲ್ ಸೇವ್ ಆಗಿರುತ್ತದೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ, ಮುಂದೆಂದಾದರೂ ಬ್ಲಾಗಿನ ಡಿಸೈನ್ ಬದಲಿಸಲು ಹೋಗಿ ತೊಂದರೆಯಾದರೆ ಹಿಂದಿದ್ದ ಟೆಂಪ್ಲೇಟನ್ನೇ restore ಮಾಡಬಹುದು.


ಈಗ ಟೆಂಪ್ಲೇಟ್ restore ಮಾಡುವುದು ಹೇಗೆಂದು ನೋಡೋಣ. ಮೊದಲು ಬ್ಲಾಗರ್‌ನ Dashboard--> Design--> Edit HTMLಗೆ ಹೋಗಿ, ಅಲ್ಲಿ Backup / Restore Template ಎಂಬುದರ ಕೆಳಗೆ Browse.. ಬಟನ್ ಇರುತ್ತದೆ, ಅದನ್ನು ಒತ್ತಿ.


ನಂತರ ನಿಮ್ಮ ಟೆಂಪ್ಲೇಟ್‌ ಕೋಡ್ ಇರುವ .xml ಫೈಲ್‌ನ್ನು ಆರಿಸಿ Open ಒತ್ತಿ.


ಆಮೇಲೆ Browse.. ಪಕ್ಕದಲ್ಲಿರುವ Upload ಬಟನ್ ಒತ್ತಿ.



ಕೊನೆಗೆ ಕೆಳಭಾಗದಲ್ಲಿ SAVE TEMPLATE ಎಂದು ಬರೆದಿರುವ ಕೇಸರಿ ಬಣ್ಣದ ಬಟನ್ ಇರುತ್ತದೆ. ಅದನ್ನು ಒತ್ತಿದರೆ ಆಯಿತು. ನಿಮ್ಮ ಮೊದಲಿದ್ದ ಟೆಂಪ್ಲೇಟ್ restore ಆಗುತ್ತದೆ.





ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Monday, November 08, 2010

ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವ ವಿಧಾನ

ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)

(ಇಲ್ಲಿರುವ ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.




ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert). ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.
 


ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.


ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.


ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.


ಈ ವಿಷಯವಾಗಿ ಏನಾದರೂ ಸಂದೇಹಗಳಿದ್ದರೆ ಪ್ರಶ್ನೆಗಳನ್ನು ಕೇಳಿ, ಪರಿಹರಿಸುವ ಪ್ರಯತ್ನ ಮಾಡುವೆ.

ಧನ್ಯವಾದಗಳೊಂದಿಗೆ,
ಪ್ರಸನ್ನ.ಎಸ್.ಪಿ