ಟೆಕ್-ಕನ್ನಡದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿದ್ದೇನೆ ಗಮನಿಸಿದ್ದೀರಾ? Email subscription ಬಂದಿದೆ, ಇಲ್ಲಿ ನಿಮ್ಮ ಇ-ಮೇಲ್ ವಿಳಾಸ ಕೊಟ್ಟರೆ ಹೊಸ ಲೇಖನಗಳು ಪ್ರಕಟವಾದಾಗ ನಿಮಗೆ ಅದು ಇ-ಮೇಲ್ ಮೂಲಕ ತಲುಪುತ್ತದೆ. ಬೇರೆ ಟೆಕ್ ತಾಣಗಳಲ್ಲಿ ಹೊಸ ಲೇಖನಗಳು ಪ್ರಕಟವಾದಾಗ ಇಲ್ಲಿ ಅದಕ್ಕೊಂದು ಲಿಂಕ್ ಸೃಷ್ಟಿಯಾಗಿತ್ತದೆ(Shared items). ಇದರಿಂದ ಬೇರೆ ಬೇರೆ ತಾಣಗಳ ಲೇಖನಗಳನ್ನು ಒಟ್ಟಿಗೆ ಓದಲು ಸಹಾಯವಾಗುತ್ತದೆ. ಲಿಂಕ್‌ಗಳು ಕೆಂಪು ಬಣ್ಣದಲ್ಲಿದ್ದು ಗುರುತಿಸಲು ಹೆಚ್ಚು ಸುಲಭವಾಗುತ್ತದೆ. ಎಲ್ಲಕ್ಕೂ ಹೆಚ್ಚಾಗಿ ಹೊಸ ಡಿಸೈನ್ ಓದುಗ ಸ್ನೇಹಿಯಾಗಿದೆ, ಪುಟಗಳು ಬೇಗ ಲೋಡ್ ಆಗುತ್ತದೆ. ಈಗ ಇಂಟರ್ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಬಹುತೇಕ ಎಲ್ಲಾ ಬ್ರೌಸರ್‌ಗಳಲ್ಲಿ ಟೆಕ್-ಕನ್ನಡ ಸರಿಯಾಗಿ ಕಾಣುತ್ತದೆ. ನಿಮ್ಮ ಬ್ರೌಸರ್‌ನಲ್ಲಿ ಟೆಕ್-ಕನ್ನಡ ತಾಣ ನೋಡಲು ಏನಾದರೂ ತೊಂದರೆಯಾಗುತ್ತಿದ್ದರೆ ನಮಗೊಂದು ಇ-ಮೇಲ್ ಕಳುಹಿಸಿ ಅಥವಾ ಪ್ರತಿಕ್ರಿಯೆಯಲ್ಲಿ ಬರೆಯಿರಿ. ಹಾಗೂ ಟೆಕ್-ಕನ್ನಡವನ್ನು ಇನ್ನಷ್ಟು ಉತ್ತಮಪಡಿಸಲು ನಿಮ್ಮಲ್ಲಿ ಸಲಹೆಗಳಿದ್ದರೆ, ಅಥವಾ ಸಹಾಯ ಬೇಕಿದ್ದರೆ ಇ-ಮೇಲ್ ಕಳುಹಿಸಿ ಅಥವಾ ಕಾಮೆಂಟ್ ಬರೆಯಿರಿ.
ಧನ್ಯವಾದಗಳೊಂದಿಗೆ,
-ಟೆಕ್-ಕನ್ನಡ ನಿರ್ವಾಹಕ
No comments:
Post a Comment