ನಿರ್ವಾಹಕರಾಗಲು ಸೂಚನೆಗಳು

 ನಿಮಗೆ ಟೆಕ್-ಕನ್ನಡದ ನಿರ್ವಹಣೆಯಲ್ಲಿ ಆಸಕ್ತಿ ಇದ್ದರೆ techkannada(AT)gmail(DOT)com ಗೆ ಒಂದು ಇ-ಅಂಚೆ ಕಳುಹಿಸಿಕೊಡಿ. ನಂತರ ನಿಮಗೆ ನಿರ್ವಾಹಕರಾಗಲು ಆಹ್ವಾನ ನೀಡಲಾಗುವುದು.
 • ನಿರ್ವಾಹಕರುಗಳಿಗೆ ಈ ತಾಣವನ್ನು ಉತ್ತಮಪಡಿಸುವಲ್ಲಿ ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ.
 • ಈ ತಾಣವನ್ನು ಇನ್ನಷ್ಟು ಚೆನ್ನಾಗಿ ವಿನ್ಯಾಸಗೊಳಿಸಬಹುದು ಹಾಗೂ ಹೊಸ Gadgetಗಳನ್ನು ಸೇರಿಸಬಹುದು.
 • ಕನ್ನಡದಲ್ಲಿಲ್ಲದ ಲೇಖನಗಳನ್ನು ತೆಗೆದುಹಾಕಬೇಕು ಅಥವಾ ಬೇರೆ ಭಾಷೆಯ ಲೇಖನಗಳು ಇದ್ದಲ್ಲಿ ಅದನ್ನು ಕನ್ನಡಕ್ಕೆ ಅನುವಾದಿಸಿ ಹಾಕಬೇಕು.
 • ತಂತ್ರಜ್ಞಾನದ ಹೊರತಾದ ಲೇಖನಗಳನ್ನು ತೆಗೆದುಹಾಕಬೇಕು.
 • ಅನುಚಿತ ಪ್ರತಿಕ್ರಿಯೆಗಳು ಹಾಗೂ ಲೇಖನಗಳನ್ನು ತೆಗೆದುಹಾಕಬೇಕು.
 • ಈ ತಾಣಕ್ಕೆ ಲೇಖಕರು ಹಾಗೂ ನಿರ್ವಾಹಕರನ್ನು ಸೇರಿಸುವ ಸ್ವಾತಂತ್ರ್ಯವಿರುತ್ತದೆ.
 • ಕೆಲವೊಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಲೇಖಕರನ್ನು ಈ ತಾಣದಿಂದ ತೆಗೆದುಹಾಕುವಂತಿಲ್ಲ.
 • ಸಹ ನಿರ್ವಾಹಕರೊಂದಿಗೆ ಉತ್ತಮ ಸಹಕಾರ ಹೊಂದಿರಬೇಕು.
 • ಈ ತಾಣದ ಒಳಿತಿನ ವಿಷಯದ ಹೊರತಾಗಿ ಇನ್ನೊಬ್ಬರು ನಿರ್ವಾಹಕರನ್ನು ನಿರ್ವಾಹಕರ ಸ್ಥಾನದಿಂದ ತೆಗೆದು ಹಾಕಬಾರದು.
 • ಈ ತಾಣವನ್ನು ಯಾವುದೇ ರೀತಿಯಿಂದ ದುರ್ಬಳಕೆ ಮಾಡಬಾರದು.
 • ಈ ತಾಣದ BackUp ದೊರೆಯುವುದಿಲ್ಲವಾದ್ದರಿಂದ ಯಾವುದೇ ಬದಲಾವಣೆ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು.